ಶಿರೂರು ಟೋಲ್ ಗೇಟ್ ಅಂಬುಲೆನ್ಸ್ ಅಫಘಾತ – ಚಾಲಕ ಪೊಲೀಸ್ ವಶಕ್ಕೆ

Spread the love

ಶಿರೂರು ಟೋಲ್ ಗೇಟ್ ಅಂಬುಲೆನ್ಸ್ ಅಫಘಾತ – ಚಾಲಕ ಪೊಲೀಸ್ ವಶಕ್ಕೆ

ಕುಂದಾಪುರ: ಶರವೇಗದಲ್ಲಿ ಧಾವಿಸುತ್ತಿದ್ದ ಆಂಬುಲೆನ್ಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಶಿರೂರು ಟೋಲ್ ಗೇಟ್ ನಲ್ಲಿ ಬುಧವಾರ ಸಂಜೆ ನಿಯಂತ್ರಣ ತಪ್ಪಿ ಅಂಬುಲೆನ್ಸ್ ಟೋಲ್ ಸಂಗ್ರಹಣ ಕೊಠಡಿಗೆ ಢಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್ ನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ದಾರುಣ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸರು ಅಂಬುಲೆನ್ಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಅಂಬುಲೆನ್ಸ್ ಚಾಲನೆಯ ವೇಳೆ ಚಾಲಕ ರೋಶನ್ ರೊಡ್ರಿಗಸ್ ಮದ್ಯಪಾನ ಮಾಡಿದ್ದ ಎನ್ನುವ ಆರೋಪದ ಹಿನ್ನಲೆಯಲ್ಲಿ ಪೋಲಿಸರು ವಶಕ್ಕೆ ಪಡೆದಿದ್ದು, ಆತನ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಬೈಂದೂರು ಪೋಲಿಸರು ತಿಳಿಸಿದ್ದಾರೆ.

ಹೊನ್ನಾವರದ ಬಳಕೂರಿನ ಗಜಾನನ ಲಕ್ಷ್ಮಣ ನಾಯ್ಕ್ ಅವರಿಗೆ ರಕ್ತದೊತ್ತಡ ಹೆಚ್ಚಾದ ಹಿನ್ನೆಲೆ ಭಟ್ಕಳಕ್ಕೆ ಕರೆದೊಯ್ದು ಭಟ್ಕಳ ವೈದ್ಯರ ಶಿಫಾರಸ್ಸಿನಂತೆ ಉಡುಪಿಯ ಆಸ್ಪತ್ರೆಗೆ ಕುಟುಂಬಿಕರು ಆಂಬುಲೆನ್ಸ್ ಮೂಲಕ ಸಾಗಿಸುತ್ತಿದ್ದ ವೇಳೆ ಅಪಘಾತ ನಡೆದಿತ್ತು. ಆಂಬುಲೆನ್ಸ್ ಚಾಲಕನ ವೇಗ ಅರಿತ ಶಿರೂರು ಟೋಲ್ ಸಿಬ್ಬಂದಿ ಟೋಲ್ ಮಾರ್ಗ ಮಧ್ಯೆ ಮಲಗಿದ್ದ ದನವನ್ನು ಓಡಿಸಲು ಮುಂದಾಗಿದ್ದರು. ಇದೇ ವೇಳೆ ವೇಗವಾಗಿ ಸಾಗಿ ಬರುತ್ತಿದ್ದ ಆಂಬುಲೆನ್ಸ್ ಸಾಗಲು ಅನುಕೂಲವಾಗಲಿ ಎಂದು ಇನ್ನೋರ್ವ ಟೋಲ್ ಸಿಬ್ಬಂದಿ ಗೇಟ್ ಬಳಿ ಅಡ್ಡಲಾಗಿ ಇಟ್ಟ ಬ್ಯಾರಿಕೇಡ್ ಗಳನ್ನು ತೆರವು ಮಾಡಲು ತೆರಳಿದ್ದರು. ಇದೇ ವೇಳೆ ದನ ಏಕಾಏಕಿ ಮೇಲೆದ್ದ ಕಾರಣ ತಬ್ಬಿಬ್ಬಾದ ಆಂಬುಲೆನ್ಸ್ ಚಾಲಕ ಬ್ರೇಕ್ ಅದುಮಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಆಂಬುಲೆನ್ಸ್ ಟೋಲ್ ಸಂಗ್ರಹಣ ಕೊಠಡಿಗೆ ಢಿಕ್ಕಿಯಾಗಿ ಆ ಬಳಿಕ ಮಗುಚಿ ಬಿದ್ದಿದೆ. ಢಿಕ್ಕಿಯ ತೀವೃತೆಗೆ ಆಂಬುಲೆನ್ಸ್ ಹಿಂಬದಿಯ ಬಾಗಿಲು ತೆರೆದ ಪರಿಣಾಮ ಆಂಬುಲೆನ್ಸ್ ಒಳಗಿದ್ದವರೆಲ್ಲರೂ ಹೊರಗೆ ಎಸೆಯಲ್ಪಟ್ಟಿದ್ದರು. ಘಟನೆಯಲ್ಲಿ ಘಟನೆಯಲ್ಲಿ ಹೊನ್ನಾವರದ ಹಾಡಗೇರಿಯ ನಿವಾಸಿಗಳಾದ ಮಂಜುನಾಥ ಮಾದೇವ ನಾಯ್ಕ, ಲೋಕೇಶ್ ನಾಯ್ಕ್, ಜ್ಯೋತಿ ನಾಯ್ಕ, ಬಳಕೂರಿನ ಗಜಾನನ ಲಕ್ಷ್ಮಣ ನಾಯ್ಕ್ ಮೃತಪಟ್ಟಿದ್ದರು.


Spread the love

Leave a Reply

Please enter your comment!
Please enter your name here