ಶಿರ್ಲಾಲಿನಲ್ಲಿ ನಡೆದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ಗೋಕಳ್ಳತನ ; ಗೋವುಗಳ ರಕ್ಷಣೆ

Spread the love

ಶಿರ್ಲಾಲಿನಲ್ಲಿ ನಡೆದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ಗೋಕಳ್ಳತನ ; ಗೋವುಗಳ ರಕ್ಷಣೆ

ಕಾರ್ಕಳ:  ಶಿರ್ಲಾಲಿನಲ್ಲಿ ಗೋ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯ ನಡೆದ ಕೆಲವೇ ಗಂಟೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾರುತಿ ಕಾರಿ ನಲ್ಲಿ ಕದ್ದೊಯ್ಯುತಿದ್ದ ಎರಡು ಹಸುಗಳನ್ನು ರಕ್ಷಣೆ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕೇರ್ವಾಶೆ ಕಡೆಗೆ ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದು  ಗೋಕಳ್ಳರು ಶಿರ್ಲಾಲು ಮಸೀದಿ ಪಕ್ಕದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.  ಘಟನೆಯಿಂದ ಸ್ಥಳದಲ್ಲಿ ಸ್ವಲ್ಪ ಸಮಯ ಬಿಗುವಿನ ವಾತಾವರಣ ಉಂಟಾಗಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಜೆಕಾರು ಠಾಣಾಧಿಕಾರಿ ಮತ್ತವರ ತಂಡ ಕಾರನ್ನು ಜಪ್ತಿ ಮಾಡಿದ್ದು ಎರಡು ಹಸುಗಳನ್ನು ವಶಕ್ಕೆ ಪಡೆದಿದ್ದಾರೆ.

 ಗೋ ಕಳ್ಳತನದ ವಿರುದ್ಧ ಭಾನುವಾರವಷ್ಠೆ ಶಿರ್ಲಾಲಿನಲ್ಲಿ ಹಿಂದು ಜಾಗರಣ ವೇದಿಕೆಯಿಂದ  ಜನಜಾಗೃತಿ ಸಭೆ  ಕೂಡ ಜರುಗಿತ್ತು

ಘಟನೆಯ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


Spread the love