ಶಿರ್ವದಲ್ಲಿ ಕಲ್ಲು ಸಾಗಾಟದ ಟೆಂಪೊ ಪಲ್ಟಿ – ಚಾಲಕನಿಗೆ ಗಾಯ

Spread the love

ಶಿರ್ವದಲ್ಲಿ ಕಲ್ಲು ಸಾಗಾಟದ ಟೆಂಪೊ ಪಲ್ಟಿ – ಚಾಲಕನಿಗೆ ಗಾಯ

ಉಡುಪಿ : ಕಲ್ಲುಗಳನ್ನು ಸಾಗಿಸುತ್ತಿದ್ದ ಟೆಂಪೊವೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಶಿರ್ವ ಸಮೀಪದ ಸೈಂಟ್ ಮೇರಿಸ್ ಶಾಲೆಯ ಬಳಿ ಶನಿವಾರ ಸಂಭವಿಸಿದೆ.

ಶನಿವಾರ ಬೆಳಿಗ್ಗೆ ಶಿರ್ವ ಕಡೆಯಿಂದ ಕಟಪಾಡಿ ಯತ್ತ ಕಲ್ಲುಗಳನ್ನು ತುಂಬಿಸುಕೊಂಡು ಬರುತ್ತಿದ್ದ ಟೆಂಪೊವೊಂದು ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಟೆಂಪೊ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಶಿರ್ವ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Spread the love