ಶಿರ್ವ: ಅಕ್ರಮವಾಗಿ ಗೋ ಸಾಗಾಟ –   ಇಬ್ಬರು ಆರೋಪಿಗಳ ಬಂಧನ

Spread the love

ಶಿರ್ವ: ಅಕ್ರಮವಾಗಿ ಗೋ ಸಾಗಾಟ –   ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬೊಲೆರೋ ಪಿಕ್‌ ಅಪ್‌ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಶಿರ್ವ ಪೊಲೀಸರು ಬೆನ್ನಟ್ಟಿ ಗೋವು ಸಹಿತ ವಾಹನವನ್ನು ವಶಕ್ಕೆ ಪಡೆದು, ಪರಾರಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ  ಘಟನೆ ಭಾನುವಾರ ಮುಂಜಾನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಮೊಹಮ್ಮದ್‌ ಇಸ್ಮಾಯಿಲ್ ಸರ್ಫರಾಝ್‌ ಮತ್ತು ಮಹಮ್ಮದ್‌ ತೌಫಿಕ್‌ ಎಂದು ಗುರುತಿಸಲಾಗಿದೆ.  ಇನ್ನೋರ್ವ ಆರೋಪಿ ಪರಾರಿಯಾಗಿದ್ದು ಹುಡುಕಾಟ ನಡೆಸುತ್ತಿದ್ದಾರೆ.

ಶಿರ್ವ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಶ್ರೀ ಶೈಲ್‌ ಡಿ ಎಂ ಅವರಿಗೆ ಅಕ್ರಮವಾಗಿ ವಾಹನದಲ್ಲಿ ದನಗಳನ್ನು ಮಾಂಸದ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದ ಮೇರೆಗೆ ಶಿರ್ವ ಮಸೀದಿ ಜಂಕ್ಷನ್‌ ಬಳಿ ನಿಂತಿದ್ದು ಈ ವೇಳೆ ಬಂಟಕಲ್ಲು ಕಡೆಯಿಂದ ಬಿಳಿ ಬಣ್ಣದ ವ್ಯಾಗನರ್‌ ಕಾರೊಂದು ವೇಗವಾಗಿ ಹೋಗಿದ್ದು ಅದರ ಹಿಂಬಂದಿಯಿಂದ ಇನ್ನೊಂದು ಪಿಕ್‌ ಅಪ್‌ ವಾಹನ ಹೋಗಿರುವುದನ್ನು ಗಮನಿಸಿ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಮತ್ತು ಪಿಕ ಅಪ್‌ ವಾಹನದಲ್ಲಿ ಒರ್ವ ವ್ಯಕ್ತಿ ಇದ್ದು ಬೂತೊಟ್ಟು ಕ್ರಾಸ್‌ ಬಳಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ಪಿಕ ಅಪ್‌ ವಾಹನದಲ್ಲಿ ನಾಲ್ಕು ಜಾನುವಾರುಗಳನ್ನು ನೈಲಾನ್‌ ಹಗ್ಗದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡು ಬಂದಿದೆ.

ಬಳಿಕ ಪೊಲೀಸರು ಪರಾರಿಯಾದ ಆರೋಪಿಗಳಲ್ಲಿ ಮೊಹಮ್ಮದ್‌ ಇಸ್ಮಾಯಿಲ್ ಸರ್ಫರಾಝ್‌ ಮತ್ತು ಮಹಮ್ಮದ್‌ ತೌಫಿಕ್‌ ಎಂಬವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೋರ್ವ ಆರೋಪಿ ಹುಡುಕಾಟ ಮುಂದುವರೆದಿದೆ.

4 ಜಾನುವಾರು, ವ್ಯಾಗನರ್‌ ಕಾರು ಅಂದಾಜು ಮೌಲ್ಯ ರೂ 1.50 ಲಕ್ಷ ಹಾಗೂ ಪಿಕ್‌ ವಾಹನ ಅಂದಾಜು ಮೌಲ್ಯ ರೂ 2.50 ಲಕ್ಷಗಳಾಗಿದ್ದು ವಶಪಡಿಸಿಕೊಳ್ಳಲಾಗಿದೆ.

ಶಿರ್ವ ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


Spread the love