ಶಿರ್ವ : ಅಕ್ರಮ ದನದ ಮಾಂಸ ಸಾಗಾಟ – ಓರ್ವನ ಬಂಧನ

Spread the love

ಶಿರ್ವ : ಅಕ್ರಮ ದನದ ಮಾಂಸ ಸಾಗಾಟ – ಓರ್ವನ ಬಂಧನ

ಉಡುಪಿ: ಅಕ್ರಮವಾಗಿ ಜಾನುವಾರು ಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಶಿರ್ವ ಪೊಲೀಸರು ಸೋಮವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಸುಭಾಸ್ ನಗರ ನಿವಾಸಿ ಫಾರೂಕ್ (39) ಎಂದು ಗುರುತಿಸಲಾಗಿದೆ.

ಸೋಮವಾರ ಶಿರ್ವ ಪಿ ಎಸ್ ಐ ಶ್ರೀ ಶೈಲ್ ಡಿ ಎಂ ಅವರಿಗೆ ದೊರೆತ ಖಚಿತ ಮಾಹಿತಿಯೊಂದಿಗೆ ತನ್ನ ಸಿಬಂದಿಯೊಂದಿಗೆ ಸುಭಾಸ್ ನಗರ ಅಶ್ವಿನ್ ಫೈಬರ್ ಡೊರ್ ಅಂಗಡಿ ಎದುರುಗಡೆ ಒಮಿನಿ ಕಾರನ್ನು ತಡೆದಿದ್ದು ಅದರಲ್ಲಿದ್ದ ಒರ್ವ ತಪ್ಪಿಸಿಕೊಂಡಿದ್ದು ಇನ್ನೋರ್ವ ಆರೋಪಿ ಫಾರೂಕ್ ಅವನನ್ನು ಬಂಧಿಸಿದ್ದು, ಕಾರಿನಲ್ಲಿದ್ದ 3 ಗೋಣಿ ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love