ಶಿರ್ವ: ಕಾರು ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಫಘಾತ – ಇಬ್ಬರಿಗೆ ಗಾಯ

Spread the love

ಶಿರ್ವ: ಕಾರು ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಫಘಾತ – ಇಬ್ಬರಿಗೆ ಗಾಯ

ಉಡುಪಿ: ಟೆಂಪೋ ಟ್ರಾವೆಲರ್ ಮತ್ತು ಕಾರಿನ ನಡುವೆ ನಡೆದ ಅಫಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಶಿರ್ವದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಶಿರ್ವದ ದಿನೇಶ್ ಶೆಟ್ಟಿ ಎಂಬವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಇನ್ನೊಂದು ಕಾರನ್ನು ಒವರೇಟೇಕ್ ಮಾಡುವ ವೇಳೆ ಎದುರಿನಿಂದ ಬರುತ್ತಿದ್ದ ಟೆಂಪೊ ಟ್ರಾವೆಲರ್ ಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ದಿನೇಶ್ ಶೆಟ್ಟಿ ಮತ್ತು ಸೂರಜ್ ಎಂಬವರು ಗಾಯಗೊಂಡಿದ್ದಾರೆ. ಟೆಂಪೋ ಚಾಲಕ ಪ್ರಮೋದ್ ಅವರ ಸಮಯ ಪ್ರಜ್ಞೆಯಿಂದ ಟೆಂಪೊದಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love