ಶಿರ್ವ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Spread the love

ಶಿರ್ವ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಉಡುಪಿ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶಿರ್ವಾ ಠಾಣಾಧಿಕಾರಿ ಶ್ರೀ ಶೈಲ ಎಂ ಡಿ ಅವರ ತಂಡ ಬುಧವಾರ ಬಂಧಿಸಿದೆ.

ಬಂಧಿತ ವ್ಯಕ್ತಿಯನ್ನು ಓರಿಸ್ಸಾ ನಿವಾಸಿ ಪ್ರಸ್ತುತ ಕದಿಕೆ ಬಡಾನಿಡಿಯೂರು ಬಳಿ ವಾಸವಾಗಿರುವ ಸಾಗರ್ (22) ಎಂದು ಗುರುತಿಸಲಾಗಿದೆ.

ಡಿಸೆಂಬರ್ 6 ರಂದು ಆರೋಪಿ ಸಾಗರ್ ಶಿರ್ವ ಸೈಂಟ್ ಮೇರೀಸ್ ಸರ್ಕಲ್ ಬಳಿ ಓರ್ವ ವ್ಯಕ್ತಿಯು ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಬಂದಿದ್ದು, ಸ್ಥಳಕ್ಕೆ ಶಿರ್ವಾ ಠಾಣಾಧಿಕಾರಿ ಶ್ರೀ ಶೈಲ ಎಂ ಡಿ ಅವರ ತಂಡ ದಾಳಿ ನಡೆಸಿ ಆತನಿಂದ 1 ಕೆಜಿ, 100 ಗ್ರಾಂ ಗಾಂಜಾ ( ತಲಾ 50 ಗ್ರಾಂ ನಂತೆ 22 ಪ್ಲಾಸ್ಟಿಕ್ ತೊಟ್ಟೆಗಳು) ಅಂದಾಜು ಮೌಲ್ಯ 32,000/-, 7 ಖಾಲಿ ಪ್ಲಾಸ್ಟಿಕ್ ತೊಟ್ಟೆಗಳು, ನಗದು ರೂ. 1,200/- ಗಾಂಜಾ ತುಂಬಿಸಿದ ಬ್ಯಾಗ್, ಮತ್ತು ಕೆಎ 19 ಇಸಿ 0202 ನೇ ದ್ವಿಚಕ್ರ ವಾಹನ, ಮತ್ತು ವಿವೋ ಕಂಪೆನಿಯ ಮೊಬೈಲ್ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


Spread the love