ಶಿರ್ವ ಗ್ರಾಮೀಣ ಕಾಂಗ್ರೆಸಿನ ನೂತನ ಅಧ್ಯಕ್ಷರ ಪದಗ್ರಹಣ

Spread the love

ಶಿರ್ವ ಗ್ರಾಮೀಣ ಕಾಂಗ್ರೆಸಿನ ನೂತನ ಅಧ್ಯಕ್ಷರ ಪದಗ್ರಹಣ

ಕಾಪು: ಶಿರ್ವ ಗ್ರಾಮೀಣ ಕಾಂಗ್ರೆಸ್ನ ನೂತನ ಅದ್ಯಕ್ಷರ ಪದಗ್ರಹಣ ಕಾರ್ಯಕ್ರಮವು ಶಿರ್ವ ಮೋನಿಸ್ ಕಾಂಪ್ಲೆಕ್ಸಿನಲ್ಲಿ ನಡೆಯಿತು.

ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಿಕಟಪೂರ್ವ ಅಧ್ಯಕ್ಷರಾದ ರತನ್ ಶೆಟ್ಟಿಯವರು ನೂತನ ಅಧ್ಯಕ್ಷರಾದ ಮೆಲ್ವಿನ್ ಡಿಸೋಜರವರಿಗೆ ಅಧಿಕಾರ ಹಸ್ತಾಂತರಿ ತಮ್ಮ ಅಧಿಕಾರ ಅವಧಿಯಲ್ಲಿ ಸಹಕರಿಸಿದವರಿಗೆ ಧನ್ಯವಾದ ತಿಳಿಸಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ ಶಿರ್ವ ಕಾಂಗ್ರೆಸ್ ಹಿರಿಯ ನಾಯಕರಾದ ಇಗ್ನೇಶಿಯಸ್ ಡಿಸೋಜರವರ ಮಗ ಮೆಲ್ವಿನ್ ಡಿಸೋಜ ಗ್ರಾಮೀಣ ಕಾಂಗ್ರೆಸಿನ ಅಧ್ಯಕ್ಷರಾಗಿದ್ದು, ದಿ. ಕುಟ್ಟಿ ಪೂಜಾರಿಯವರ ಮಗ ಕೀರ್ತನ್ ಪೂಜಾರಿಯವರು ಯುವ ಕಾಂಗ್ರಿಸಿನ ಅಧ್ಯಕ್ಷರಾಗಿದ್ದು, ಹಳೆ ಬೇರು ಹೊಸ ಚಿಗುರು ಎಂಬಂತಾಗಿದ್ದು, ಹೊಸ ಬದಲಾವಣೆಗೆ ನಾಂದಿಯಾಗಿದೆ.  ಮೆಲ್ವಿನ್ ಡಿಸೋಜರವರನ್ನು ಶಿರ್ವ ಕಾಂಗ್ರೆಸಿನ ಎಲ್ಲಾ ನಾಯಕರ ಅಭಿಪ್ರಾಯ ಪಡೆದು ಸರ್ವಾನುಮತದಿಂದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಶಿರ್ವ ಕಾಂಗ್ರೆಸಿನ ಸಂಘಟಣೆಯನ್ನು ಚುರುಕುಗೊಳಿಸುವಂತೆ ಹಾಗೂ ಬೂತ್ ಮಟ್ಟದಲ್ಲಿ ಸಮಿತಿಯನ್ನು ರಚಿಸುವಂತೆ ತಿಳಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿಯೊಂದು ಹೆಣ್ಣುಮಕ್ಕಳ ಖಾತೆಗೆ ರೂ 2,000/- ಜಮಾ ಮಾಡಲಾಗುವುದು ಹಾಗೂ ಇತರ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗುವುದು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವನ್ನು ತರುವಂತೆ ಶ್ರಮಿಸಲು ಕರೆ ನೀಡಿದರು.

ಕೆ.ಪಿ.ಸಿ.ಸಿ. ವೀಕ್ಷಕಾರದ ನವೀನ್ ಚಂದ್ರ ಶೆಟ್ಟಿಯವರು ಮಾತನಾಡಿ ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಪಕ್ಷವಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕಾರ್ಯಕರ್ತರಲ್ಲಿ ಕೇಳಿಕೊಂಡರು ಹಾಗೂ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದರು.

ನ್ಯಾಯವಾದಿ ಅಸದುಲ್ಲಾ ಕಟಪಾಡಿಯವರು ಮಾತನಾಡಿ ಶಿರ್ವ ಕಾಂಗ್ರೆಸಿನ ಭದ್ರ ಕೋಟೆಯಾಗಿದ್ದು, ಇವತ್ತಿನ ಪರಿಸ್ಥಿತಿಯಲ್ಲಿ ದೇಶದ ಅಭಿವೃದ್ಧಿಗೆ ಹಾಗೂ ಸುಭದ್ರತೆಗೆ ಹಾಗೂ ಸಾಮರಸ್ಯಕ್ಕೆ ಕಾಂಗ್ರೆಸಿನ ಅಗತ್ಯವಿದ್ದು, ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರು ಈಗಿನ ಬಿಜೆಪಿ ಸರ್ಕಾರವನ್ನು ತೊಲಗಿಸಲು ಕಾರ್ಯ ಪ್ರವೃತ್ತರಾಗುವಂತೆ ಕರೆ ನೀಡಿ, ಯುವಕರಿಗೆ ಪಕ್ಷದಲ್ಲಿ ಆಧ್ಯತೆ ನೀಡಬೇಕೆಂದು ಹೇಳಿದರು.

ಮೆಲ್ವಿನ್ ಡಿಸೋಜ ಮಾತನಾಡಿ, ರಾಜ್ಯದ ಬಿಜೆಪಿ ಸರಕಾರದಿಂದ ಜನರು ಬೇಸತ್ತಿದ್ದು, ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿದ್ದು, ವಿನಯ್ ಕುಮಾರ್ ಸೊರಕೆಯವರನ್ನು ಮತ್ತೆ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ, ಎಲ್ಲಾ ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಕೋರಿದರು.

ಕಾಂಗ್ರೆಸ್ ಪಕ್ಷದಲ್ಲಿ ದುಡಿದ ಹಿರಿಯ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸನ್ಮಾನ ಮಾಡಲಾಯಿತು. ಶಿರ್ವ ಗ್ರಾಮೀಣ ಕಾಂಗ್ರೆಸಿನ ಮಾಜಿ ಅಧ್ಯಕ್ಷರಾದ ವಿಲ್ಸನ್ ರೋಡ್ರಿಗಸ್, ರತನ್ ಶೆಟ್ಟಿ ಅವರ ಕೊಡುಗೆಯನ್ನು ಸ್ಮರಿಸಿ, ಸನ್ಮಾನಿಸಲಾಯಿತು. ಶಿರ್ವ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.

ದೆಹಲಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಶಿರ್ವ ಡಾನ್ ಬೋಸ್ಕೊ ಶಾಲೆಯ ಏಡನ್ ಕ್ರಿಸ್ ದಾಂತಿ ಇವರಿಗೆ ಅಭಿನಂದಿಸಲಾಯಿತು.

ನೂತನ ಪದಾಧಿಕಾರಿಗಳಿಗೆ ಕಾಂಗ್ರೆಸ್ ಶಾಲು ಹಾಕಿ ಅಭಿನಂದಿಸಲಾಯಿತು. ನೂತನ ಯುವ ಕಾಂಗ್ರೆಸ್ ಅದ್ಯಕ್ಷರಾಗಿ ಆಯ್ಕೆಯಾದ ಕೀರ್ತನ್ ಪೂಜಾರಿ ಇವರಿಗೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ರವರು ಕಾಂಗ್ರೆಸ್ ಬಾವುಟ ನೀಡಿ ಜವಾಬ್ದಾರಿ ಹಸ್ತಾಂತರಿಸಿದರು.

ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ  ವಿಲ್ಸನ್ ರೊಡ್ರಿಗಸ್, ಗೀತಾ ವಾಗ್ಳೆ, ರತನ್ ಶೆಟ್ಟಿ, ಜಿತೇಂದ್ರ ಪುರ್ಟಾಡೊ, ರಮೀಜ್ ಹುಸೇನ್, ಜುಬೇರ್ ಅಹಮದ್, ಹಸನಬ್ಬ ಶೇಕ್, ಕೆ. ಆರ್ ಪಾಟ್ಕರ್, ಗ್ರೇಸಿ ಕಾರ್ಡೋಜಾ, ಅನಿತಾ ಡಿಸೋಜ, ಬೆಳ್ಮಣ್ಣು, ಕೀರ್ತನ್ ಪೂಜಾರಿ, ಹಸನ್ ಇಬ್ರಾಹಿಂ, ಜೈನುದ್ದೀನ್, ಮೆಗೇಶ್ ಪೂಜಾರಿ, ಲಕ್ಷ್ಮಣ್ ಪೂಜಾರಿ, ಗಿಲ್ಬರ್ಟ್ ಪಿಂಟೊ, ಅರುಣ್ ಪೂಜಾರಿ, ಮೆಲ್ವಿನ್ ಅರಾಹ್ನ, ಶೈಲೇಶ್ ಹೆಗ್ಡೆ – ಮಟ್ಟಾರು, ಅಬ್ದುಲ್ ಲತೀಫ್, ಉದಯ ಸಫಳಿಗ, ಸುರೇಶ್ ಪೂಜಾರಿ, ಹರಿಶ್ಚಂದ್ರ ನಾಯ್ಕ, ಉದಯ ಕೋಟ್ಯಾನ್, ರೀಟಾ ಮತಾಯಸ್, ಲಿಲ್ಲಿ ಮೋನಿಸ್, ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮೆಲ್ವಿನ್ ಡಿಸೋಜರವರು ಸ್ವಾಗತಿಸಿ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ  ಹಸನಬ್ಬ ಶೇಖ್ ಇವರು ಧನ್ಯವಾದ ಸಮರ್ಪಿಸಿದರು. ಬೆಳ್ತಂಗಡಿಯ ಪ್ರಜ್ಞಾ ಒಡಿನಾಳರವರು ಕಾರ್ಯಕ್ರಮ ನಿರೂಪಿಸಿದರು. ಗೀತಾ ವಾಗ್ಲೆ ಪ್ರಾರ್ಥನೆ ನೆರವೇರಿಸಿದರು


Spread the love