
Spread the love
ಶಿರ್ವ : ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ
ಶಿರ್ವ; ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ಲು ಹೇರೂರು ಎಂಬಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯೊಂದರಲ್ಲಿ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಬಂಟಕಲ್ಲು ಹೇರೂರು ನಿವಾಸಿ ಜಾನ್ ಡಿಸೋಜಾ(69) ಎಂದು ಗುರುತಿಸಲಾಗಿದೆ.
ಸುಮಾರು 69 ವರ್ಷ ಪ್ರಾಯದ ಜಾನ್ ಡಿಸೋಜ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದು ಬೆಳಿಗ್ಗೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಮನೆಯ ಬಾವಿಯಲ್ಲಿ ಶವವಾಗಿ ಇರುವುದು ಪತ್ತೆಯಾಗಿದೆ.
ಮಲ್ಪೆಯ ಈಜು ತಜ್ಞ ಈಶ್ವರ್ ಬಾವಿಯಲ್ಲಿ ಮುಳುಗಿ ಶವ ಮೇಲೆ ತರಲು ಸಹಕರಿಸಿದರು.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love