ಶಿರ್ವ: ನೀರು ಪಾಲಾದ ದೈವ ನರ್ತಕನ ಶವ ಪತ್ತೆ

Spread the love

ಶಿರ್ವ: ನೀರು ಪಾಲಾದ ಯುವಕನ ಶವ ಪತ್ತೆ

ಶಿರ್ವ: ನಡಿಬೆಟ್ಟು ಆಣೆಕಟ್ಟು ಬಳಿ ರವಿವಾರ ಸಂಜೆ ಗಾಳ ಹಾಕಿ ಮೀನು ಹಿಡಿಯಲು ಹೋಗಿ ಆಕಸ್ಮಾತ್ತಾಗಿ ಜಾರಿಬಿದ್ದು ನೀರು ಪಾಲಾದ ಶಿರ್ವ ಮಟ್ಟಾರು ನಿವಾಸಿ ದಿಲೀಪ್ (30) ಅವರ ಶವ ಸೋಮವಾರ ಮಧ್ಯಾಹ್ನ ಆಣೆಕಟ್ಟು ಬಳಿ ಪತ್ತೆಯಾಗಿದೆ.

ಉಡುಪಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್.ಏನ್. ನೇತೃತ್ವದಲ್ಲಿ ಗ್ರೂಪ್ ಲೀಡರ್ ಸತೀಶ್ ಮತ್ತು ಸಿಬಂದಿ ಹಾಗೂ ಮಲ್ಪೆಯ ಮುಳುಗುತಜ್ಞ ಈಶ್ವರ್ ಸತತ 4 ಗಂಟೆ ಗಳ ಕಾಲ ಕಾರ್ಯಚರಣೆ ನಡೆಸಿ ಶವವನ್ನು ಪತ್ತೆಹಚ್ಚಿದ್ದಾರೆ. ರವಿವಾರ ರಾತ್ರಿ ಬೆಳಕಿನ ಅಡಚನೆಯಿಂದಾಗಿ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು.

ಘಟನಾ ಸ್ಥಳಕ್ಕೆ ಶಿರ್ವ ಪಿ ಎಸ್ ಐ ಶ್ರೀಶೈಲ್ ಮುರಾಗೋಡ್ ಮತ್ತು ಸಿಬಂದಿ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಅಗ್ನಿಶಾಮಕ ದಳದ ಶಂಕರ್, ಉಮೇಶ್, ವಿನಾಯಕ, ಚಂದ್ರಶೇಖರ, ಸುಜೇಶ್ ಮತ್ತು ಆದರ್ಶ್ ಪಾಲ್ಗೊಂಡಿದ್ದರು.

ದಿಲೀಪ್ ದೈವ ನರ್ತಕರಾಗಿದ್ದರು. ಈ ಸಂಬಂಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love