ಶಿರ್ವ: ಬಡ ವಿಧವೆ ಮಹಿಳೆಗೆ ಹೊಸಮನೆ ಕಟ್ಟಿ ಕೊಟ್ಟ ಪಂಚಾಯತ್ ಉಪಾಧ್ಯಕ್ಷೆ

Spread the love

 ಶಿರ್ವ: ಬಡ ವಿಧವೆ ಮಹಿಳೆಗೆ ಹೊಸಮನೆ ಕಟ್ಟಿ ಕೊಟ್ಟ ಪಂಚಾಯತ್ ಉಪಾಧ್ಯಕ್ಷೆ

 ಶಿರ್ವ: ಪಂಚಾಂಗ ಹಾಕಿ ಸುಮಾರು 4 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸಮನೆಯ ಕನಸು ನನಸು ಮಾಡಿದ ಕೀರ್ತಿ ಶಿರ್ವ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ   ಗ್ರೇಸಿ ಕಾರ್ಡೊಜಾರವರಿಗೆ ಸಲ್ಲುತ್ತದೆ.

ಶಿರ್ವ ಗ್ರಾಮದ ಬಂಟಕಲ್ಲು ವಾರ್ಡ್ ಪೊದಮಲೆ ಎಂಬಲ್ಲಿ ವಾಸಿಸುತ್ತಿದ್ದ ಗಿರಿಜಾ ಮೂಲ್ಯ ಎಂಬ ಬಡ ವಿಧವೆ ಮಹಿಳೆಯು ಬೇರೆಯವರ ಜಾಗದಲ್ಲಿ ವಾಸಿಸಲು ಯೋಗ್ಯವಲ್ಲದ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು, ಆರ್ಥಿಕ ಅಡಚಣೆಯಿಂದಾಗಿ ಹೊಸಮನೆಗೆ ಪಂಚಾಂಗ ಹಾಕಿದ್ದರೂ ಕೆಲಸ ಬಾಕಿ ಉಳಿದಿತ್ತು. ಇದನ್ನು ಮನಗಂಡು ಶಿರ್ವಗ್ರಾಮ ಪಂಚಾಯತ್ ಉಪಾಧ್ಯಕ್ಷೆ “ ಗ್ರೇಸಿ ಕಾರ್ಡೊಜರವರು ಅವರ ನೆರವಿಗೆ ಧಾವಿಸಿ ದಾನಿಗಳ ಸಹಕಾರದೊಂದಿಗೆ ಸದ್ರಿ ಮನೆಯ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಅವರಿಗೆ ಹೊಸಮನೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ರಿ ಹೊಸಮನೆ “ಆಶೀರ್ವಾದ” ಗೃಹಪ್ರವೇಶ ಕಾರ್ಯಕ್ರಮ   ಗ್ರೇಸಿ ಕಾರ್ಡೊಜರವರ ವೈವಾಹಿಕ ಜೀವನದ 34ನೇ ಸಂವತ್ಸರದಂದು ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ  ವಿನಯಕುಮಾರ್ ಸೊರಕೆ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿಯವರು ಆಗಮಿಸಿ ಶುಭಕೋರಿದರು. ಪ್ರಮುಖ ದಾನಿಗಳಲ್ಲಿ ಒಬ್ಬರಾದ Save Life Trust ಮಂಗಳೂರು ಇದರ “ಅರ್ಜುನ್ ಭಂಡಾರ್ಕರ್, ರಾಮಕೃಷ್ಣ ಶರ್ಮ ಬಂಟಕಲ್ಲು, ಪೀಟರ್ ಕೋರ್ಡಾ ಹಾಜರಿದ್ದು ಅವರನ್ನು ಸನ್ಮಾನಿಸಲಾಯಿತು.  ಗ್ರೇಸಿ ಕಾರ್ಡೊಜ ದಂಪತಿಗಳನ್ನು ಕೂಡಾ ಸನ್ಮಾನಿಸಲಾಯಿತು. ನ್ಯಾಯವಾದಿ ಮೆಲ್ವಿನ್ ಡಿಸೋಜ ಸ್ವಾಗತಿಸಿ ಪ್ರಾಸ್ತವಿಕ ಮಾತಗಳಾನ್ನಾಡಿದರು. ದಾನಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಮಾಜ ಸೇವಕ ಸುರೇಶ್ ಆಚಾರ್ಯರವರು ಧನ್ಯವಾದವಿತ್ತರು.

ಸುಮಾರು ನಾಲ್ಕು ಲಕ್ಷ ವೆಚ್ಚದಲ್ಲಿ ಹೊಸಮನೆಯ ನಿರ್ಮಾಣವಾಗಿದೆ. ಶಿರ್ವ ಗ್ರಾಮ ಪಂಚಾಯತ್‍ನ ಸಹಕಾರದೊಂದಿಗೆ ಮನೆ ನಿರ್ಮಾಣದ ಕೆಲಸವಾಗಿದೆ. ಶಿರ್ವ ಗ್ರಾಮ ಪಂಚಾಯತ್‍ನ ಸಹಕಾರದೊಂದಿಗೆ ಮನೆ ನಿರ್ಮಾಣದ ಕೆಲಸವಾಗಿದೆ. ಶಿರ್ವ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ   ಗ್ರೇಸಿ ಕಾರ್ಡೊಜಾರವರೊಂದಿಗೆ ಶಿರ್ವ ಗ್ರಾಮ ಪಂಚಾಯತ್ ಮಾಜಿ ಸದಸ್ಯ  ಮೆಲ್ವಿನ್ ಡಿಸೋಜರವರು ಈ ಉತ್ತಮ ಕಾರ್ಯದಲ್ಲಿ ಅವರೊಂದಿಗೆ ಕೈಜೋಡಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ  ರತನ್ ಶೆಟ್ಟಿ, ಸುಹಾಸ್ ಪೂಜಾರಿ,  ಸುಜಾತ ಪೂಜಾರ್ತಿ, ಗೀತಾ ನಾಯಕ್, ಸತೀಶ್ ಬಂಟಕಲ್ಲು,  ಗೀತಾ ವಾಗ್ಳೆ,  ವಿಲ್ಸನ್ ರೊಡ್ರಿಗಸ್, ಸಮಾಜ ಸೇವಕ  ಸುರೇಶ್ ಆಚಾರ್ಯ, ಗ್ರೇಸಿ ಕಾರ್ಡೊಜಾರವರ ಪತಿ ರೋಬರ್ಟ ಕಾರ್ಡೊಜಾ ಮಗಳು ರಿಶಲ್ ಕಾರ್ಡೊಜಾ, ರೀಟಾ ಮತಾಯಸ್ ಮತ್ತು ಶಿರ್ವ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಊಟದ ವ್ಯವಸ್ಥೆ ಮಾಡಲಾಯಿತು.


Spread the love