ಶಿಲ್ಪಾ ಆತ್ಮಹತ್ಯೆ ಪ್ರಕರಣ: ಆರೋಪಿ ದಂಪತಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

Spread the love

ಶಿಲ್ಪಾ ಆತ್ಮಹತ್ಯೆ ಪ್ರಕರಣ: ಆರೋಪಿ ದಂಪತಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಕುಂದಾಪುರ: ಇಲ್ಲಿನ ಉಪ್ಪಿನಕುದ್ರು ಯುವತಿ ಶಿಲ್ಪಾ ದೇವಾಡಿಗ ಆತ್ಮಹತ್ಯೆಗೆ ಕಾರಣನಾದ ಮೂಡುಗೋಪಾಡಿಯ ನಿವಾಸಿ ಅಜೀಜ್ ಹಾಗೂ ಆತನ ಪತ್ನಿ ಸಲ್ಮಾ ದಂಪತಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡಬೇಕು, ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ದೇವಾಡಿಗ ಸಮಾಜ ಸೇವಾ ಸಂಘದ ಮುಖಂಡರು ಕುಂದಾಪುರದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಲವ್ ಜಿಹಾದ್‌ನಿಂದ ಸಾವಿಗೀಡಾದ ಶಿಲ್ಪಾ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಬಟ್ಟೆಯಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶಿಲ್ಪಾಳನ್ನು ವಿವಾಹಿತ ಅಜೀಜ್ ಪ್ರೇಮದ ಬಲೆಗೆ ಸಿಲುಕಿಸಿ, ಅವಳನ್ನು ದೈಹಿಕವಾಗಿ ಬಳಸಿಕೊಂಡು, ಅವಳ ಪೋಟೋಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಮಾನಹಾನಿ ಮಾಡುತ್ತೇನೆಂದು ಕಿರುಕುಳ ನೀಡಿ, ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುವಂತೆ ಒತ್ತಡ ಹಾಕಿದ್ದರಿಂದ ಶಿಲ್ಪಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಅಜೀಜ್‌ನ ಕೂಲಂಕಷವಾಗಿ ತನಿಖೆ ನಡೆಸಬೇಕು. ಈ ಜಾಲ ಇನ್ನಷ್ಟು ವ್ಯಾಪಿಸಿರುವ ಸಾಧ್ಯತೆಯಿದ್ದು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತ ರಾಜು ಅವರು ಮನವಿಯನ್ನು ಮೇಲಾಧಿಕಾರಿಗಳಿಗೆ ರವಾನಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ದೇವಾಡಿಗ ಸಮಾಜದ ಮುಂದಾಳು ಶಂಕರ ಅಂಕದಕಟ್ಟೆ, ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು ತಿಳಿದು ಬಂತು. ಆ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಈ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕು. ಈ ಪ್ರಕರಣ ಗಂಭೀರವಾಗಿದ್ದು, ಲವ್ ಜಿಹಾದ್ ಮೂಲಕ ಅಮಾಯಕ ಹೆಣ್ಣುಮಕ್ಕಳನ್ನು ವಂಚಿಸುತ್ತಿರುವುದು ಕಂಡು ಬರುತ್ತದೆ. ಆರೋಪಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕು ಮತ್ತು ನೊಂದ ಕುಟುಂಬಕ್ಕೆ ಸರಕಾರದಿಂದ ಪರಿಹಾರ ದೊರಕಿಸಿಕೊಡುವ ಕಾರ್ಯ ಆಗಬೇಕಾಗಿದೆ ಎಂದರು.

ಉಡುಪಿ ನಗರ ದೇವಾಡಿಗ ಸಮಾಜದ ಅಧ್ಯಕ್ಷ ವಿಜಯ ಕೊಡವೂರು ಮಾತನಾಡಿ, ಶಿಲ್ಪ ದೇವಾಡಿಗ ಆತ್ಮಹತ್ಯೆಯ ರೂವಾರಿ ಅಜೀಜ್‌ಗೆ ಗಲ್ಲು ಶಿಕ್ಷೆವಿಧಿಸಬೇಕು. ಇಂಥಹ ಕೃತ್ಯ ಮಾಡುವುವರಿಗೆ ಈ ಘಟನೆ ಪಾಠವಾಗಬೇಕು. ಈತನ ಬಗ್ಗೆ ಕೊಲಂಕಷ ತನಿಖೆಯಿಂದ ಇನ್ನಷ್ಟು ಪ್ರಕರಣಗಳು ಹೊರಬರುವ ಸಾಧ್ಯತೆಗಳಿವೆ. ಇಂತಹವರಿಗೆ ಬೆಂಬಲ ನೀಡುವವರನ್ನು ನಾವು ದೂರವಿಡಬೇಕು. ಧರ್ಮ ಜಾಗೃತಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ದೇವಾಡಿಗ ಸಮಾಜ ಸೇವಾ ಸಂಘ ಕುಂದಾಪುರ ತಾಲೂಕು ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಸಮಾಜದ ಪ್ರಮುಖರಾದ ಗೌರಿ ದೇವಾಡಿಗ, ಸಂಜೀವ ದೇವಾಡಿಗ, ಜಗದೀಶ ದೇವಾಡಿಗ,ರಾಜೇಶ ದೇವಾಡಿಗ ಕಂಬದದೋಣೆ, ಚಂದ್ರಶೇಖರ ದೇವಾಡಿಗ ಕೋಟೇಶ್ವರ, ನರಸಿಂಹ ದೇವಾಡಿಗ, ಚರಣ್ ದೇವಾಡಿಗ, ಉದಯ ಹೇರಿಕೆರೆ, ಆನಂದ, ಶ್ರೀಮತಿ ದೇವಾಡಿಗ, ಚಂದ್ರಶೇಖರ ದೇವಾಡಿಗ, ಶ್ರೀನಿವಾಸ ದೇವಾಡಿಗ, ರವಿ ಉಪ್ಪಿನಕುದ್ರು, ಕರುಣಾಕರ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಉಪ್ಪಿನಕುದ್ರುವಿನಲ್ಲಿರುವ ಮೃತ ಶಿಲ್ಪಾ ದೇವಾಡಿಗ ಮನೆಗೆ ಭೇಟಿ ನೀಡಿ, ಈ ಪ್ರಕರಣದಲ್ಲಿ ಇಡೀ ದೇವಾಡಿಗ ಸಮಾಜ ನಿಮ್ಮೊಂದಿಗೆ ಇರುತ್ತದೆ ಎಂದು ಧೈರ್ಯದ ಮಾತುಗಳನ್ನಾಡಿ, ಸಾಂತ್ವನ ಹೇಳಲಾಯಿತು.


Spread the love