
ಶಿವಪಾಡಿ ದೇಗುಲದಲ್ಲಿ ಕಣ್ಮನ ಸೆಳೆದ “ಶಿವಚಿತ್ತಾರ’ ಚಿತ್ರಕಲಾ ಸ್ಪರ್ಧೆ
ಉಡುಪಿ: ಶಿವಪಾಡಿ ಶ್ರೀಉಮಾಮಹೇಶ್ವರ ದೇಗುಲದಲ್ಲಿ ಫೆ. 22ರಿಂದ ಮಾ. 5ರ ವರೆಗೆ ನೆರವೇರಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಅತಿರುದ್ರ ಮಹಾಯಾಗ ಸಮಿತಿ ಪ್ರಾಯೋಜಕತ್ವದಲ್ಲಿಆರ್ಟಿಸ್ಟ್ ಫೋರಮ್ಸಹಯೋಗದೊಂದಿಗೆ ಉಡುಪಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ “ಶಿವಚಿತ್ತಾರ” ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಂದಿ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದರು.
ಮಣಿಪಾಲ ಬ್ರಹ್ಮಕುಮಾರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸೌರಭಾ ಅವರು ಕಾರ್ಯಕ್ರಮ ಉದ್ಘಾಟಿಸಿ, ದೇವರ ಮೇಲಿನ ಅಪಾರ ಭಕ್ತಿಯನ್ನು ಕಲೆಯ ಮೂಲಕ ಭಗವಂತನಿಗೆ ಸಮರ್ಪಿಸಲು ಶಿವಚಿತ್ತಾರ ಚಿತ್ರಕಲಾ ಸ್ಪರ್ಧೆ ಒಂದು ಉತ್ತಮ ಮಾರ್ಗವಾಗಿದೆ. ಇದರಿಂದ ಮಕ್ಕಳಲ್ಲಿ ಕಲಾಸಕ್ತಿಯೊಂದಿಗೆ ಧಾರ್ಮಿಕ ಪ್ರಜ್ಞೆಯ ಉದ್ದೀಪನಗೊಳ್ಳಲಿದೆ. ಭಗವಂತನಿಗೆ ಪ್ರೀತಿ ಮತ್ತು ಭಕ್ತಿಯಿಂದ ಕಳೆಯನ್ನು ಸಮರ್ಪಿಸಿದಾಗ ನಮ್ಮೆಲ್ಲ ಕಾರ್ಯಗಳೂ ಯಶಸ್ವಿಯಾಗಲಿವೆ ಎಂದರು.
ಆರ್ಟಿಸ್ಟ್ ಫೋರಮ್ನ ಅಧ್ಯಕ್ಷ ರಮೇಶ್ರಾವ್ ಮತ್ತು ತಂಡ ಅತ್ಯಂತ ಪಾರದರ್ಶಕವಾಗಿ ತೀರ್ಪುನೀಡಿದರು.
ಮಣಿಪಾಲದ ಬ್ರಹ್ಮಕುಮಾರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸುಜಾತಾ, ಸಾವಿತ್ರಿ ಶ್ರೀಧರ ಸಾಮಂತ್, ಶಿಲ್ಪಾ ರಘುಪತಿಭಟ್, ಆರ್ಟಿಸ್ಟ್ ಫೋರಮ್ನ ಕಾರ್ಯದರ್ಶಿ ಸಕುಪಾಂಗಾಳ, ಮರಳು ಶಿಲ್ಪ ಕಲಾವಿದ ಶ್ರೀನಾಥ್ ಮಪಾಲ, ದೇಗುಲದ ಮೊಕ್ತೇಸರರಾದ ಶುಭಕರ ಸಾಮಂತ್, ದಿನೇಶ್ಪ್ರಭು, ಕಾರ್ಯದರ್ಶಿ ಸುರೇಶ್ ಶ್ಯಾನುಭಾಗ್, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಕಾರ್ಯಕ್ರಮ ಸಂಚಾಲಕರಾದ ಡಾ| ಆಶಾ ಪಾಟೀಲ್, ರಶ್ಮಿತಾ ಬಾಲಕೃಷ್ಣ, ಅತಿರುದ್ರ ಮಹಾಯಾಗ ಸಮಿತಿ ಕಾರ್ಯದರ್ಶಿಗಳಾದ ಪ್ರಕಾಶ್ಕುಕ್ಕೆಹಳ್ಳಿ, ಬಾಲಕೃಷ್ಣ ಮದ್ದೋಡಿ, ರತ್ನಾಕರಇಂದ್ರಾಳಿ ಉಪಸ್ಥಿತರಿದ್ದರು.
ಆಕರ್ಷಕ ಚಿತ್ರ ಬಿಡಿಸಿದ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅತಿಥಿ ಗಣ್ಯರಿಗೆ ಶಿವನ ಪ್ರೀತ್ಯರ್ಥ ಬಿಲ್ವ ಪತ್ರೆ ಗಿಡಗಳನ್ನು ನೀಡಿ ಗೌರವಿಸಲಾಯಿತು. ಸಂಚಾಲಕಿ ಸುಚೇತಾ ನಾಯಕ್ ಸ್ವಾಗತಿಸಿ, ನಿರೂಪಿಸಿದರು.