
ಶಿವಮೊಗ್ಗ: ಅಪ್ರಾಪ್ತ ಬಾಲಕಿಯ ಅಪಹರಣ – ಸಂಶಯಾಸ್ಪದ ವ್ಯಕ್ತಿಯ ಮಾಹಿತಿಗೆ ಪೊಲೀಸರ ಮನವಿ
ಶಿವಮೊಗ್ಗ: ದಿನಾಂಕ:-27-12-2021 ರಂದು ಸಂಜೆ ಶಿವಮೊಗ್ಗ ಟೌನ್ನಿಂದ ಅಪ್ರಾಪ್ತ ವಯಸ್ಸಿನ ಬಾಲಕಿ ಅಪಹರಣಕ್ಕೆ ಒಳಗಾದ ಬಗ್ಗೆ ಅದೇ ದಿನ ರಾತ್ರಿ 9-30 ಗಂಟೆಗೆ ವಿದ್ಯಾದಿ ರವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣಾ ಗುನ್ನೆ ನಂ 02/2021 ಕಲಂ 363 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ಈ ಕೇಸಿನಲ್ಲಿ ಸಂಶಯಾಸ್ಪದ ವ್ಯಕ್ತಿಯಾಗಿರುವ ಲಿಂಗರಾಜ್ ಯಾನ ವಿರಾಟ್ ಯಾನೆ ರಾಜು, ತಂದೆ ಲಕ್ಷ್ಮೀ ನಾರಾಯಣ, 26 ವರ್ಷ, ವಾಸ: ಕೆ.ಪಿ ಅಗ್ರಹಾರ, ಬೆಂಗಳೂರು ಈತನು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿರುವ ಬಗ್ಗೆ ಮಾಹಿತಿ ಇದ್ದು, ಈ ವ್ಯಕ್ತಿ ಹಾಗೂ ಅಪಹರಣಕ್ಕೊಳಗಾದ ಬಾಲಕಿ ಎಲ್ಲಿಯಾದರೂ ಕಂಡು ಬಂದಲ್ಲಿ ಕೂಡಲೇ ಪೊಲೀಸ್ ನಿರೀಕ್ಷಕರು ಮಹಿಳಾ ಪೊಲೀಸ್ ಠಾಣೆ ಶಿವಮೊಗ್ಗ ಫೋನ್ ನಂ 9480803349, 9449584739 ಗೆ ಹಾಗೂ ಶಿವಮೊಗ್ಗ ಪೊಲೀಸ್ ನಿಯಂತಣ ಕೊಠಡಿ ಪೋನ್ ನಂ 9480803300 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.
ಸಂಶಯಾಸ್ಪದ ವ್ಯಕ್ತಿಯಾಗಿರುವ ಲಿಂಗರಾಜ್ ಯಾನ ವಿರಾಟ್ ಯಾನೆ ರಾಜು
ಅಪಹರಣಕ್ಕೊಳಗಾದ ಬಾಲಕಿಯ ಚಹರೆ ಗುರುತುಗಳು: ವಯಸ್ಸು: 16 ವರ್ಷ, ಎತ್ತರ: 135 ಸೆಂಟಿಮೀಟರ್, ಸಾಮಾನ್ಯ ಕಪ್ಪು ಬಣ್ಣದ ಕೂದಲು, ಗೋದಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ.
ಸಂಶಯಾಸ್ಪದ ವ್ಯಕ್ತಿಯ ಫೋಟೋ ಮತ್ತು ಚಹರೆ ಗುರುತುಗಳು ಈ ಕೆಳಕಂಡಂತೆ ಇರುತ್ತೆ. ಎತ್ತರ: 5.5 ಅಡಿ ಸಾಧಾರಣ ಮೈಕಟ್ಟು ದುಂಡು ಮುಖ, ಎಣ್ಣೆ ಗೆಂಪು ಮೈಬಣ್ಣ, ಕಪ್ಪು ಕಣ್ಣುಗಳು ಚಿಗುರು ಗಡ್ಡ, ಚಿಗುರು ಮೀಸೆ ಬಿಟ್ಟಿದ್ದು, ಕನ್ನಡ ಹಾಗೂ ತೆಲುಗು ಮಾತನಾಡುತ್ತಿದ್ದು, ಎಡಗೈ ಹಾಗೂ ಬಲಗೈ ಮೊಣಕೈ ಮೇಲೆ ಹಳೆಯ ಗಾಯದ ಕಲೆಗಳು