ಶಿವಮೊಗ್ಗ: ಕಚ್ಛಾ ನಾಡಾ ಬಾಂಬ್ ಸ್ಫೋಟ; ಐವರಿಗೆ ಗಾಯ

Actor Navdeep, Co Founder C Space Along With Rakesh Rudravanka - CEO - C Space
Spread the love

ಶಿವಮೊಗ್ಗ: ಕಚ್ಛಾ ನಾಡಾ ಬಾಂಬ್ ಸ್ಫೋಟ; ಐವರಿಗೆ ಗಾಯ

ಶಿವಮೊಗ್ಗ : ಕಚ್ಛಾ ನಾಡಾ ಬಾಂಬ್ ಸ್ಪೋಟಗೊಂಡು ಐವರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಕುಂಚೇನಹಳ್ಳಿಯಲ್ಲಿ ನಡೆದಿದೆ.

ಕುಂಚೇನಹಳ್ಳಿಯ ತಮಿಳ್ ಕುಮಾರ್ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಡಾ ಬಾಂಬ್‌ಗಳನ್ನು ಬಿಸಿಲಿಗೆ ಒಣಗಿಸುವುದಕ್ಕಾಗಿ ತಮಿಳ್ ಕುಮಾರ್ ತನ್ನ ಮನೆಯ ಛಾವಣಿಯ ಮೇಲೆ ಇಟ್ಟಿದ್ದರೆನ್ನಲಾಗಿದೆ. ಅವುಗಳಲ್ಲಿ ಕೆಲವು ಉರುಳಿ ಕೆಳಗೆ ಬಿದ್ದಿದ್ದು, ಈ ವೇಳೆ ಸ್ಪೋಟಗೊಂಡಿವೆ ಎನ್ನಲಾಗಿದೆ. ಇವನೊಂದಿಗೆ ಇನ್ನು ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ನಾಡಬಾಂಬ್ ಗಳನ್ನು ಕಾಡು ಹಂದಿಯನ್ನು ಓಡಿಸುವುದಕ್ಕೆ ಬಳಸಲೆಂದು ಸಂಗ್ರಹಿಸಿಟ್ಟಿದ್ದರೆನ್ನಲಾಗಿದೆ.

ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love