ಶಿಶು ಪತ್ತೆ: ವಾರಸುದಾರರು ಸಂಪರ್ಕಿಸಲು ಕೋರಿಕೆ 

Spread the love

ಶಿಶು ಪತ್ತೆ: ವಾರಸುದಾರರು ಸಂಪರ್ಕಿಸಲು ಕೋರಿಕೆ 
 

ಮಂಗಳೂರು: 2022ರ ಅಕ್ಟೋಬರ್ 6 ರಂದು ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಜಾಯ್ ಲ್ಯಾಂಡ್ ರೋಡ್ ಗೇರು ಸಂಶೋಧನಾ ಕೇಂದ್ರದ ಬಳಿಯ ಲಕ್ಷ್ಮಿ ನಿವಾಸದ ಬಳಿ ನವಜಾತ ಶಿಶು ಪತ್ತೆಯಾಗಿತ್ತು. ಶಿಶುವನ್ನು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಮಗುವಿನ ವಾರಸುದಾರರು ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಕಚೇರಿಗೆ ಸಂಪರ್ಕಿಸಬಹುದು.

ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 1 ನೇ ಮಹಡಿ ಜಿಲ್ಲಾಧಿಕಾರಿಗಳ ಕಚೇರಿ, ಮಂಗಳೂರು-575001, ದೂ.ಸಂಖ್ಯೆ-0824-2440004, 9482756407 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love