ಶೋಭಾ ಕರಂದ್ಲಾಜೆ ಕಾರ್ಯವೈಖರಿಯ ಬಗ್ಗೆ ಮಿಥುನ್ ರೈ ಸರ್ಟಿಫಿಕೇಟ್ ಅಗತ್ಯವಿಲ್ಲ – ಕೇಸರಿ ಯುವರಾಜ್

Spread the love

ಶೋಭಾ ಕರಂದ್ಲಾಜೆ ಕಾರ್ಯವೈಖರಿಯ ಬಗ್ಗೆ ಮಿಥುನ್ ರೈ ಸರ್ಟಿಫಿಕೇಟ್ ಅಗತ್ಯವಿಲ್ಲ – ಕೇಸರಿ ಯುವರಾಜ್

ಉಡುಪಿ: ತನ್ನ ಕ್ಷೇತ್ರದಲ್ಲಿ ಅಸ್ತಿತ್ವ ಇಲ್ಲದ ಮಿಥುನ್ ರೈ ಉಡುಪಿ ಸಂಸದರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಶೋಭಾ ಕರಂದ್ಲಾಜೆಯವರ ಕಾರ್ಯವೈಖರಿಯದ ಬಗೆ ಮಾತನಾಡಲು ಮಿಥುನ್ ರೈ ಅನ್ಹರ್ಹ, ಸಂಸದರು ಮಾಡಿದ ಕೆಲಸದ ಬಗೆ ಉಡುಪಿ- ಚಿಕ್ಕಮಂಗಳೂರು ಜಿಲ್ಲೆಯ ಜನತೆಗೆ ತಿಳಿದಿದೆ ಮಿಥುನ್ ರೈಯ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೇಸರಿ ಯುವರಾಜ್ ಅವರು ಮಿಥುನ್ ರೈ ವಿರುದ್ಧ ಕಿಡಿಕಾರಿದ್ದಾರೆ

ಮಂಗಳೂರಿನಿಂದ ಗೇಟ ಪಾಸ್ ಪಡೆದ ಮಿಥುನ್ ರೈ ತಮ್ಮ ಪಕ್ಷದ ನಿರುದ್ಯೋಗಿ ನಾಯಕರ ಬಗ್ಗೆ ಕಾಳಜಿ ತೋರಿಸಲಿ ಅದನ್ನು ಬಿಟ್ಟು ಉಡುಪಿಯಾ ಜನರ ಚಿಂತೆ ಬೇಡ ಉಡುಪಿಯಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ನಿರಂತರವಾಗಿ ಜನರಿಗೆ ಸ್ಪಂದಿಸುತ್ತಿದೆ ಮಿಥುನ್ ರೈಯ ಬಿಟ್ಟಿ ಸಲಹೆ ಬಿಜೆಪಿ ಸರ್ಕಾರಕ್ಕೆ ಅವಶ್ಯಕತೆ ಇಲ್ಲ ….. ಅಷ್ಟು ಕಾಳಜಿ ಇದರೆ ತನ್ನ ಕ್ಷೇತ್ರದಲ್ಲಿ ಅಸ್ತಿತ್ವ ಪಡೆದುಕೊಂಡು ಕೆಲಸ ಮಾಡಿ ತೋರಿಸಲಿ

ಬಹುಮಾನ ಘೋಷಿಸಿದ ಮಿಥುನ್ ರೈಯ ಬಳಿ ಅಷ್ಟೊಂದು ಹಣವಿದ್ದರೆ ಆ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡಿ ಅದನ್ನು ಬಿಟ್ಟು ಬಿಟ್ಟಿ ಪೋಸ್ ಕೊಡುವ ಅಗತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love