ಶೋಭಾ ಬೇಕಲ್ ಬಿಜೆಪಿಯ ಸದಸ್ಯರೇ ಅಲ್ಲ – ವೀಣಾ ಶೆಟ್ಟಿ

Spread the love

ಶೋಭಾ ಬೇಕಲ್ ಬಿಜೆಪಿಯ ಸದಸ್ಯರೇ ಅಲ್ಲ – ವೀಣಾ ಎಸ್ ಶೆಟ್ಟಿ

ಉಡುಪಿ: ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಶೋಭಾ ಬೇಕಲ್ ಅವರು ಬಿಜೆಪಿಯ ಸದಸ್ಯರೂ ಕೂಡ ಆಗಿರಲಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಎಸ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ಶೋಭಾ ಬೇಕಲ್ ಅವರು ಬಿಜೆಪಿ ಸದಸ್ಯರು ಎಂದು ವರದಿಯಾಗಿದ್ದು ಅವರು ಎಂದೂ ಬಿಜೆಪಿಯ ವಾರ್ಡ್ ಸಭೆಯಾಗಲಿ, ಪಕ್ಷದ ಕಚೇರಿಗಾಗಲಿ ಒಂದು ದಿನವೂ ಭೇಟಿ ಕೊಟ್ಟವರಲ್ಲ. ಅಲ್ಲದೆ ಅವರು ಬಿಜೆಪಿಯ ಸದಸ್ಯತ್ವ ಕೂಡ ಹೊಂದಿಲ್ಲ ಅವರಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಾವು ಮಹಿಳಾ ಮೋರ್ಚಾದ ಸದಸ್ಯರು ಅವರನ್ನು ಈ ವರೆಗೆ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಕೂಡ ಕಂಡಿಲ್ಲ ಕೇವಲ ಪ್ರಚಾರದ ಉದ್ದೇಶದಿಂದ ಕಾಂಗ್ರೆಸ್ ಪಕ್ಷದವರು ಆಕೆಯನ್ನು ಬಿಜೆಪಿ ಸದಸ್ಯರು ಎಂದು ಬಿಂಬಿಸುವ ಮೂಲಕ ಸುಳ್ಳಿನ ರಾಜಕೀಯ ನಡೆಸುತ್ತಿದ್ದಾರೆ. ಇಂತಹ ಸುಳ್ಳು ರಾಜಕೀಯ ಜನರು ಯಾವುದೇ ರೀತಿಯ ಮನ್ನಣೆ ನೀಡುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love