ಶ್ರೀಕೃಷ್ಣಮಠದ ಸಪ್ತೋತ್ಸವದಲ್ಲಿ ಉಡುಪಿ ಡಿಸಿ, ಎಸ್ಪಿ ಮತ್ತು ಜಿಪಂ ಸಿ ಇ ಒ ಭಾಗಿ

Spread the love

ಶ್ರೀಕೃಷ್ಣಮಠದ ಸಪ್ತೋತ್ಸವದಲ್ಲಿ ಉಡುಪಿ ಡಿಸಿ, ಎಸ್ಪಿ ಮತ್ತು ಜಿಪಂ ಸಿ ಇ ಒ ಭಾಗಿ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಅಂಗವಾಗಿ ನಡೆಯುವ ಸಪ್ತೋತ್ಸವದ ಕಾರ್ಯಕ್ರಮದಲ್ಲಿ,ಪರ್ಯಾಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಯವರಾದ ಜಿ.ಜಗದೀಶ್,ಉಡುಪಿ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್,ಉಡುಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ನವೀನ ಭಟ್,ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಮುಖ್ಯಸ್ಥರಾದ ಗೋಪಾಲಕೃಷ್ಣ ಸಾಮಗ ಉಪಸ್ಥಿತರಿದ್ದರು.

ಈ ವೇಳೆ ವಿವಿಧ ಕ್ಷೆತ್ರಗಳಲ್ಲಿ ಸಾಧನೆಗೈದ ಮಹನೀಯರಾದ ಪಡುಬಿದ್ರೆ ಖಡ್ಗೇಶ್ವರೀ ಬ್ರಹ್ಮಸ್ಥಾನದ ಪಾತ್ರಿಗಳಾದ ಪಿ.ಜಿ.ನಾರಾಯಣ ರಾವ್,ಉಡುಪಿ ಸುಧೀಂದ್ರ ತೀರ್ಥ ಔಷಧ ಭಂಡಾರದ ಲಕ್ಷ್ಮೀನಾರಾಯಣ ಭಟ್,ಬಂಟಕಲ್ಲು ಪ್ರಗತಿಪರ ಕೃಷಿಕರಾದ ರಾಮಕೃಷ್ಣ ಶರ್ಮ ಇವರನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿದರು.


Spread the love

Leave a Reply

Please enter your comment!
Please enter your name here