ಶ್ರೀರಂಗಪಟ್ಟಣ ಕ್ರೀಡಾ ದಸರಾಕ್ಕೆ ಕ್ರೀಡಾಪಟುಗಳ ಆಹ್ವಾನ

Spread the love

ಶ್ರೀರಂಗಪಟ್ಟಣ ಕ್ರೀಡಾ ದಸರಾಕ್ಕೆ ಕ್ರೀಡಾಪಟುಗಳ ಆಹ್ವಾನ

ಮಂಡ್ಯ; ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ನಡೆಸಲಾಗುತ್ತಿರುವ ಕ್ರೀಡಾ ದಸರಾದಲ್ಲಿ ಪಾಲ್ಗೊಳ್ಳಲು ಆಸಕ್ತ ಕ್ರೀಡಾಪಟುಗಳು ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ನೋಂದಣಿಗೆ ಸೆ.26 ಕೊನೆಯ ದಿನವಾಗಿದೆ.

ಕ್ರೀಡಾಕೂಟಗಳ ವಿವರಗಳನ್ನು ನೋಡುವುದಾದರೆ, ಪುರುಷ ಮತ್ತು ಮಹಿಳೆಯರಿಗೆ ಸೆ. 27 ರಂದು ಬೆಳಿಗ್ಗೆ 9.30 ಕ್ಕೆ ಕೆ.ಶೆಟ್ಟಹಳ್ಳಿಯ ಸಾಯಿ ಗಾರ್ಮೆಂಟ್ಸ್ ಎದುರು ಕೆಸರು ಗದ್ದೆ ಓಟ (29 ವರ್ಷ ಒಳಗಿನ ಹಾಗೂ 30 ವರ್ಷದೊಳಗಿನ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಮಾತ್ರ) ಹಾಗೂ ಹಗ್ಗ ಜಗ್ಗಾಟ ಮಧ್ಯಾಹ್ನ 2-30 ಕ್ಕೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ನೋಂದಾಣಿಗಾಗಿ ದೈವಶಿಗಾಮಣಿ ಮೊ.ಸಂ.7502126870ನ್ನು ಸಂಪರ್ಕಿಸಬಹುದಾಗಿದೆ.

ಸೆ.28 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಿಂದ ಕರಿಘಟ್ಟ ದೇವಸ್ಥಾನದ ಪಾದದವರೆಗೆ ಮ್ಯಾರಾಥಾನ್, ನೋಂದಾಣಿಗಾಗಿ ಅಚೀವರ್ಸ್ ಅಕಾಡೆಮಿ ಡಾ. ರಾಘವೇಂದ್ರ ಮೊ.9620557621, ಹಾಗೂ ಸಂಜೆ 5 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಕಬಡ್ಡಿ (ಹೊನಲು ಬೆಳಕಿನಲ್ಲಿ) ನಡೆಯಲ್ಲಿದ್ದು, ರೂಪಶ್ರೀ ಮೊ.7353097540 ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ಸೆ.29 ರಂದು ಬೆಳಿಗ್ಗೆ 7 ಗಂಟೆಗೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರಿಗೆ ಬೆಟ್ಟ ಹತ್ತುವುದು(ಚಾರಣ), ನೋಂದಾಣಿಗಾಗಿ ಅಚೀವರ್ಸ್ ಅಕಾಡೆಮಿ ಡಾ. ರಾಘವೇಂದ್ರ ಮೊ.9620557621, ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 9-30ಕ್ಕೆ ವಾಲಿ ಬಾಲ್ ಮತ್ತು ಖೋ ಖೋ ನಡೆಯಲ್ಲಿದ್ದು, ನೋಂದಣಿಗಾಗಿ ಸೋಮಶೇಖರ್ ಮೊ.9740896699, ಭರತ್ ಕುಮಾರ್(ಖೋ ಖೋ) ಮೊ. 9916644097ನ್ನು ಸಂಪರ್ಕಿಸಬಹುದು.

ಸೆ.30 ರಂದು ಬೆಳಿಗ್ಗೆ 9-30 ಕ್ಕೆ ಶ್ರೀರಂಗಪಟ್ಟಣ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಚೆಸ್ ಪಂದ್ಯ ನಡೆಯಲಿದ್ದು, ನೋಂದಣಿಗೆ ಮಾಧುರಿ ಮೊ.8050244338 ಅವರನ್ನು ಮತ್ತು ಅದೇ ದಿನ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 9-30 ಕ್ಕೆ ಗುಂಡು ಎಸೆತ( ವಿಕಲ ಚೇತನರಿಗೆ ಮಾತ್ರ), ದೈವಶಿಗಾಮಣಿ ಮೊ.ಸಂ.7502126870 ಅವರನ್ನು ಸಂಪರ್ಕಿಸಿ ನೋಂದಣಿ ಮಾಡಬಹುದು.

ಅ.01 ರಂದು ಬೆಳಿಗ್ಗೆ 9-30 ಕ್ಕೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಕಬಡ್ಡಿ, ಖೋಖೋ ಮತ್ತು ವಾಲಿಬಾಲ್ ಫೈನಲ್ ಪಂದ್ಯಗಳು ಹಾಗೂ ಮಧ್ಯಾಹ್ನ 3 ಗಂಟೆಗೆ ಶ್ರೀರಂಗಪಟ್ಟಣದ ಸೇಂಥೀಲ್ ಕೋಟೆ ಆವರಣದಲ್ಲಿ ಕುಸ್ತಿ ನಡೆಯಲಿದ್ದು, ಕುಸ್ತಿ ಆಯೋಜಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ.


Spread the love

Leave a Reply

Please enter your comment!
Please enter your name here