ಶ್ರೀರಾಮಚಂದ್ರ ಭಜನಾ ಮಂದಿರ ಮಟಪಾಡಿ ಬ್ರಹ್ಮಾವರ  ವತಿಯಿಂದ ಏಕಾಹ ಭಜನಾ ಮಂಗಲೋತ್ಸವ

Spread the love

ಶ್ರೀರಾಮಚಂದ್ರ ಭಜನಾ ಮಂದಿರ ಮಟಪಾಡಿ ಬ್ರಹ್ಮಾವರ  ವತಿಯಿಂದ ಏಕಾಹ ಭಜನಾ ಮಂಗಲೋತ್ಸವ

ಬ್ರಹ್ಮಾವರ: ಶ್ರೀರಾಮಚಂದ್ರ ಭಜನಾ ಮಂದಿರ ಮಟಪಾಡಿ ಬ್ರಹ್ಮಾವರ ಇದರ ವತಿಯಿಂದ ಏಕಾಹ ಭಜನಾ ಮಂಗಲೋತ್ಸವದ ಸಮಾರೋಪ ಶನಿವಾರ ಜರುಗಿತು.

ಏಕಾಹ ಭಜನಾ ಮಂಗಲೋತ್ಸವದ ಪ್ರಯುಕ್ತ ಶ್ರೀರಾಮ ತಾರಕ ಹೋಮ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ನಂತರ ಮಧ್ಯಾಹ್ನದಿಂದ ಭಾನುವಾರ ಬೆಳಗ್ಗಿನ ವರೆಗೆ ಭಜನಾ ಮಂಗಲೋತ್ಸವ ನಡೆಯಿತು.

ಒಟ್ಟು 10 ತಂಡಗಳು ಭಜನಾ ಮಂಗಲೋತ್ಸವದಲ್ಲಿ ಪಾಲ್ಗೊಂಡಿದ್ದು ಅದರಲ್ಲಿ ಎರಡು ಮಹಿಳಾ ತಂಡಗಳು ಕೂಡ ಭಾಗವಹಿಸಿದ್ದವು. ವಿಶೇಷವಾಗಿ ಬ್ಯಾಂಡ್‌ ವಾದ್ಯಕ್ಕೆ ಕುಣಿತ ಭಜನೆ ನಡೆಯಿತು.

ಇದರಲ್ಲಿ ಶ್ರೀರಾಮಚಂದ್ರ ಭಜನಾ ಮಂದಿರ ಮಟಪಾಡಿ ಇದರ ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.


Spread the love