Home Mangalorean News Kannada News ಶ್ರೀ ಕಾಳಿ ಭಜನಾ ಮಂಡಳಿ ಕೋಳ್ಕೆರೆ ಬಸ್ರೂರು: ವಿದ್ಯಾರ್ಥಿ ವೇತನ ಹಾಗೂ ಸನ್ಮಾನ ಕಾರ್ಯಕ್ರಮ

ಶ್ರೀ ಕಾಳಿ ಭಜನಾ ಮಂಡಳಿ ಕೋಳ್ಕೆರೆ ಬಸ್ರೂರು: ವಿದ್ಯಾರ್ಥಿ ವೇತನ ಹಾಗೂ ಸನ್ಮಾನ ಕಾರ್ಯಕ್ರಮ

Spread the love

ಶ್ರೀ ಕಾಳಿ ಭಜನಾ ಮಂಡಳಿ ಕೋಳ್ಕೆರೆ ಬಸ್ರೂರು: ವಿದ್ಯಾರ್ಥಿ ವೇತನ ಹಾಗೂ ಸನ್ಮಾನ ಕಾರ್ಯಕ್ರಮ

ಕುಂದಾಪುರ: ಬಸ್ರೂರು ಗ್ರಾಮದ ಕೋಳ್ಕೆರೆಯ ಶ್ರೀ ಕಾಳಿ ಭಜನಾ ಮಂಡಳಿ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತೀರ್ಣರಾದ ಭಜನಾ ಮಂಡಳಿಯ ಸದಸ್ಯ ವಿದ್ಯಾರ್ಥಿಗಳಿಗೆ ಗೌರವ ಧನ ನೀಡಲಾಯಿತು.

ಇದೇ ವೇಳೆ ನಿವೃತ್ತಿಗೊಂಡ ನಾಲ್ಕು ಪ್ರಾದ್ಯಾಪಕರುಗಳಾದ ಮಾಧವ ಅಡಿಗ, ಕೆ ರಾಧಾಕೃಷ್ಣ ಶೆಟ್ಟಿ, ದಿನಕರ್ ಆರ್ ಶೆಟ್ಟಿ, ಅನಂತಯ್ಯ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು ಹಾಗೂ ಭಜನಾ ಮಂಡಳಿ ಅಧ್ಯಕ್ಷರಾದ ಬೇಬಿ ಶ್ರೀಕಾಂತ್ ಹಾಗೂ ಭಜನಾ ಮಂಡಳಿ ಸದಸ್ಯರುಗಳಾದ ಪಾರ್ವತಿ ಮಡಿವಾಳ, ಸುಷ್ಮಾ ಶೆಟ್ಟಿ ಇವರನ್ನು ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದೇವಾನಂದ ಶೆಟ್ಟಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ದೈವಸ್ಥಾನದ ಜೀರ್ಣೋದ್ದಾರಾ ಸಮಿತಿ ಅಧ್ಯಕ್ಷರಾದ ಶಿವರಾಮ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ್ ಗಾಣಿಗ, ಅಧ್ಯಾಪಕರಾದ ಸಂಜೀವ ನಾಯ್ಕ ಉಪಸ್ಥಿತರಿದ್ದರು.

ದೈವಸ್ಥಾನದ ಆಡಳಿತ ಮೋಕ್ತೆಸರ ಕೆ. ವಿಕಾಸ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಿದ್ಯಾಲಕ್ಷಿ ಸ್ವಾಗತಿಸಿ, ಮಾನ್ಯ ವಂದಿಸಿದರು ಹಾಗೂ ವಿಘ್ನೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version