ಶ್ರೀ ಬ್ರಹ್ಮಲಿಂಗೇಶ್ವರ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಉದ್ಘಾಟನೆ

Spread the love

ಶ್ರೀ ಬ್ರಹ್ಮಲಿಂಗೇಶ್ವರ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಉದ್ಘಾಟನೆ

ಕುಂದಾಪುರ: ಯಕ್ಷಗಾನ ಕಲಾವಿದರು ಸಂಘಟಿತ ಹೊಸ ಟ್ರಸ್ಟ್ ಹುಟ್ಟುಹಾಕಿದ್ದು, ಕಲಾವಿದರು ಮಾತ್ರವಲ್ಲದೇ ಕಾರ್ಮಿಕರನ್ನೂ ಸೇರಿಸಿಕೊಂಡಿರುವುದು ಧನಾತ್ಮಕ ಬೆಳವಣಿಗೆ. ಯಾವುದೇ ಸಂಘಟನೆ ಅಥವಾ ಟ್ರಸ್ಟ್ ಹುಟ್ಟು ಸಂಘರ್ಷಕ್ಕಲ್ಲಾ. ಬದಲಾಗಿ ಸಮಾಜದೊಂದಿಗೆ ಸೇರಿ ಸೌಹಾರ್ದತೆಗೆ ದಾರಿಯಾಗಬೇಕು. ತನ್ಮೂಲಕ ಕಲಾವಿದರಿಗೆ, ಕಾರ್ಮಿಕರಿಗೆ ನ್ಯಾಯ ಅವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಎಂದು ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜ ಹೇಳಿದರು.

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಶ್ರೀ ಬ್ರಹ್ಮಲಿಂಗೇಶ್ವರ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಉದ್ಘಾಟಿನೆಯಲ್ಲಿ ಮಾತನಾಡಿ, ಟ್ರಸ್ಟ್ ಕಲಾವಿದರ ಶ್ರೇಯಸ್ಸಿನ ಜೊತೆ ಯಕ್ಷಗಾನ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಮುಂದುವರಿಸುವ ಹೊಣೆ ಕೂಡಾ ಹೊರಬೇಕು ಎಂದು ಸಲಹೆ ನೀಡಿದರು.

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅನುವಂಶೀಯ ಮೊಕ್ತೇಸರ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ ಮಾತನಾಡಿದರು.

ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗರಾಜ ಶೆಟ್ಟಿ ನೈಕಂಬ್ಳಿ, ಶ್ರೀ ಬ್ರಹ್ಮಲಿಂಗೇಶ್ವರ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಕಲಾವಿದರ ಮಕ್ಕಳ ಪಿಯುಸಿ, ಪದವಿ ಶಿಕ್ಷಣಕ್ಕೆ ಪ್ರೇರಣಾ ನೈಕಂಬ್ಳಿ ಸಂಸ್ಥೆ ಮೂಲಕ ದತ್ತು ಪಡೆದು ಪ್ರೋತ್ಸಾಹ ನೀಡಲು ನಿರ್ಧರಿಸಿದ್ದಾರೆ.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಶಂಕರ ಭಟ್ ಮಾರಣಕಟ್ಟೆ, ಟ್ರಸ್ಟ್ ಕಾನೂನು ಸಲಹೆಗಾರ ಶರತ್ ಕುಮಾರ್ ಶೆಟ್ಟಿ ಯಳೂರು, ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅರ್ಚಕ ವಿಘ್ನೇಶ್ವರ ಮಂಜ, ಮಂಜಯ್ಯ ಶೆಟ್ಟಿ ಚಿತ್ತೂರು, ಕೆಂಚನೂರು ಗ್ರಾಪಂ ಸದಸ್ಯ ರವಿ ಕೆಂಚನೂರು, ಯಕ್ಷಪ್ರೇಮಿ ಜಯರಾಮ ಶೆಟ್ಟಿ ಹೊಸೂರು, ಸ್ಥಳದಾನಿ ರಾಮಚಂದ್ರ ಮಂಜ ಮಾರಣಕಟ್ಟೆ, ಟ್ರಸ್ಟ್ ಅಧ್ಯಕ್ಷ ಐರ್‍ಬೈಲ್ ಆನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಆಲೂರು ಇದ್ದರು.

ಕಲಾವಿದ ಸಂಜೀವ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ ಸಲಹೆಗಾರ ಆನಂತ ಹೆಗಡೆ ನಿಟ್ಟೂರು ಪ್ರಾಸ್ತಾವಿಕ ಮಾತನಾಡಿದರು. ಕೆ.ರಾಘುವೇಂದ್ರ ರಟ್ಟಾಡಿ ನಿರೂಪಿಸಿ, ವಂದಿಸಿದರು.


Spread the love