ಶ್ರೀ ಮಹದೇಶ್ವರ ದೇಗುಲದಲ್ಲಿ ರಥೋತ್ಸವಕ್ಕೆ ಸಿದ್ಧತೆ

Spread the love

ಶ್ರೀ ಮಹದೇಶ್ವರ ದೇಗುಲದಲ್ಲಿ ರಥೋತ್ಸವಕ್ಕೆ ಸಿದ್ಧತೆ

ಪಿರಿಯಾಪಟ್ಟಣ: ದೀಪಾವಳಿ ಹಬ್ಬದ ದಿನ ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ದೇವಾಲಯದಲ್ಲಿ ನಡೆಯುವ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಗಳ ಯಶಸ್ಸಿಗಾಗಿ ಸಕಲ ಸಿದ್ಧತೆ ಭರದಿಂದ ಸಾಗಿದೆ.

ಕೊರೋನಾ ಸೋಂಕಿನ ಹಿನ್ನೆಲೆ ಕಳೆದೆರಡು ವರ್ಷಗಳಿಂದ ಸರಳವಾಗಿ ಜಾತ್ರಾ ಮಹೋತ್ಸವ ಆಚರಿಸಲಾಗಿತ್ತು, ಈ ಬಾರಿ ವಿಜೃಂಭಣೆಯಿಂದ ಜಾತ್ರೆ ಆಚರಿಸಲು ಮಹದೇಶ್ವರ ಸ್ವಾಮಿ ಭಕ್ತ ಮಂಡಳಿ ಹಲವು ದಿನಗಳ ಹಿಂದಿನಿಂದಲೇ ಸಕಲ ತಯಾರಿ ಕೈಗೊಂಡಿದೆ.  ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯ ಆವರಣ ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದೇವಾಲಯ ಆವರಣದಲ್ಲಿ ಮಕ್ಕಳ ಆಟಿಕೆ ಹಾಗೂ ಗೃಹೋಪಯೋಗಿ ವಸ್ತು ಮಳಿಗೆ ತೆರೆಯಲಾಗಿದೆ. ರಥೋತ್ಸವ ದಿನ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಅನ್ನಸಂತರ್ಪಣೆ ನಡೆಸಲು ವಿಶೇಷ ಶಾಮಿಯಾನ ಹಾಗೂ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಅ.24 ರ ಸೋಮವಾರ ಸ್ವಾಮಿಯನ್ನು ಮಠದಿಂದ ಉದ್ಭವ ಸ್ಥಾನಕ್ಕೆ ಕರೆದೊಯ್ಯಲಾಯಿತು. ರಾತ್ರಿ ಎಣ್ಣೆಮಜ್ಜನ ಮತ್ತು ಪ್ರಸಾದ ವಿನಯೋಗ ನಡೆಯಿತು, ಅ.25 ರ ಮಂಗಳವಾರ ಹಾಲು ಹರವಿ ಸೇವೆ ಮತ್ತು ಸಾಯಂಕಕಾಲ ವಿಶೇಷ ಪೂಜೆ ನಡೆಯಿತು, ಅ.26 ರ ಬುಧವಾರ ಬೆಳಿಗ್ಗೆ ರಥೋತ್ಸವ ಮತ್ತು ಸಂಜೆ ಅಗ್ನಿಕೊಂಡೋತ್ಸವ ನಡೆಯಲಿದೆ, ಅ.27 ರ ಬುಧವಾರ ಪಾನಕ ಪೂಜೆ ಹಾಗೂ ಸಂಜೆ 5 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ದೇವರ ಮೆರವಣಿಗೆ ಜರಗಲಿದೆ.

ಜಾತ್ರೆ ಯಶಸ್ಸಿಗಾಗಿ ದೇವಾಲಯ ಆವರಣದಲ್ಲಿ ಮಹದೇಶ್ವರ ಸ್ವಾಮಿ ಭಕ್ತ ಮಂಡಳಿಯಿಂದ ಸಕಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಿರಿಯಾಪಟ್ಟಣ ಪೊಲೀಸರು ಬಂದೋಬಸ್ತ್ ಗಾಗಿ ದೇವಾಲಯ ಆವರಣ ಸುತ್ತ ಬ್ಯಾರಿಕೇಡ್ ಗಳನ್ನು ಇರಿಸಿ ವಾಹನ ಹಾಗೂ ಸಾರ್ವಜನಿಕರ ಸುಗಮ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.


Spread the love