
ಸಂಕಷ್ಟದಲ್ಲಿರುವ ಕಲಾವಿದರಿಗೆ ಆಹಾರ ಕಿಟ್ ವಿತರಣೆ
ಮೈಸೂರು: ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಗೀತ ಶಾಲೆ ವತಿಯಿಂದ ಹಿರಿಯ ಕಲಾವಿದರಾದ ಗೌರಮ್ಮ ರಾಮರಾವ್ ಸ್ಮರಣಾರ್ಥ ರಾಮಾನುಜ ರಸ್ತೆಯಲ್ಲಿರುವ ಕಚೇರಿಯ ಮುಂಭಾಗ ಕಲಾವಿದರಿಗೆ ಆಹಾರ ಕಿಟ್ ವಿತರಿಸಲಾಯಿತು.
ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಸ್ಥಾಪಕರಾದ ರಾಘವೇಂದ್ರ ಪ್ರಸಾದ್ ಮಾತನಾಡಿ, ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕನ್ನಡ ವೃತ್ತಿ ರಂಗಭೂಮಿಯಲ್ಲಿ ಅನೇಕ ವಿವಿಧ ವಯಸ್ಸಿನ ಕಲಾವಿದರು ರಾಷ್ಟ್ರ ರಾಜ್ಯ ಪ್ರಶಸ್ತಿಗಳನ್ನು ಪಡೆದು ಕಲಾವಿದರು ಇಂದು ಬೀದಿಗೆ ಬಂದಿದ್ದಾರೆ. ಸರ್ಕಾರ ವಿವಿಧ ಕ್ಷೇತ್ರಗಳ ಕಾರ್ಮಿಕರಿಂದ ಹಿಡಿದು ಕಲಾವಿದರವರೆಗೂ 3ಸಾವಿರ ರೂ ಸಹಾಯಧನ ಘೋಷಣೆ ಮಾಡಿದ್ದನ್ನು ಸ್ವಾಗತಿಸುತ್ತೇವೆ. ಆದರೆ ಕಲಾವಿದರಿಗೆ 35 ವರ್ಷ ಆಗಿರಬೇಕು ಎಂದು ಘೋಷಿಸಿದೆ ದಯಮಾಡಿ ಮೂವತ್ತೈದು ವರ್ಷ ನಿಗದಿ ಮಾಡಿರುವುದನ್ನು ತೆಗೆದು ಕನಿಷ್ಠ 25 ವರ್ಷ ಎಂದು ತೀರ್ಮಾನ ಮಾಡಿ ಅವರಿಗೂ ಕೂಡ ಸಹಾಯಧನ ತಲುಪಿಸುವಂತೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಜೂನ್ 5ರೊಳಗೆ ಅರ್ಜಿ ಸಲ್ಲಿಸಲು ಗಡುವು ನೀಡಿದ್ದು, ಜೂನ್ 7ರ ವರೆಗೂ ಲಾಕ್ ಡೌನ್ ಇರುವುದರಿಂದ ಎಲ್ಲಿಯೂ ಸೇವಾ ಸಿಂಧು ಅಂಗಡಿಗಳು ತೆರೆದಿರುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಕೆ ಅವಧಿ ಮುಂದುವರಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕೆಂದು ಮಾಧ್ಯಮ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು
ಸಮಾಜ ಸೇವಕರಾದ ಡಾ. ವರ್ಷ ಮಾತನಾಡಿ,ಈಗಾಗಲೇ ನೋಂದಣಿಯಾಗಿರುವವರ ಖಾತೆಗೆ ಹಣ ಜಮಾವಣೆಯಾಗಲಿದೆ. ಮತ್ತೆ ಹೋಗಿ ನೋಂದಣಿ ಮಾಡುವ ಅಗತ್ಯವಿಲ್ಲ, ಆದರೆ ಎಷ್ಟು ಜನ ನೋಂದಣಿಯಾಗಿದ್ದಾರೆ ಎಂಬುದು ಗೊತ್ತಿಲ್ಲ. ಅದಲ್ಲದೆ ಬೇಕಾದಷ್ಟು ಜನ ಕಲಾವಿದರಿದ್ದಾರೆ. ಈಗಾಗಲೇ ಹತ್ತು ದಿನದೊಳಗಡೆ ಈ ರೀತಿ ಯೋಜನೆ ರೂಪಿಸುತ್ತೇವೆ. ನಾಮಕಾವಸ್ತೆಗೆ ಕೊಡುವುದಕ್ಕಿಂತ ಕೊಟ್ಟರೆ ಒಂದು ತಿಂಗಳಿಗಾಗುವಷ್ಟು ಕೊಡಿ ಎಂದು ಹೇಳಿದರು.
ಕೊರೋನಾ ಸಂಕಷ್ಟ ಬಾಧಿಸದಿರಲಿ. ಮಾಸ್ಕ್ ನ್ನು ಕೇವಲ ಬಾಯಿಗಲ್ಲ, ಮೂಗನ್ನು ಸೇರಿಸಿ ಹಾಕಿಕೊಳ್ಳಬೇಕು. ತುಂಬಾ ಕ್ರಿಟಿಕಲ್ ಪರಿಸ್ಥಿತಿ ಇದೆ. ಸಾಯ್ತಾ ಇರೋರ ಪೈಕಿ 27ರಿಂದ 40ರ ವಯಸ್ಸಿನವರು ತುಂಬಾ ಜನರಿದ್ದಾರೆ. ಆದ್ದರಿಂದ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಎಂದರು.
ಈ ಸಂದರ್ಭ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ರಾಜಾ ವಾಸುದೇವನ್, ಮಂಜುನಾಥ್, ಕಡಕೊಳ ಜಗದೀಶ್, ಅಜಯ್ ಶಾಸ್ತ್ರಿ ಇನ್ನಿತರರು ಇದ್ದರು.