
ಸಂಚಾರಕ್ಕೆ ಅಯೋಗ್ಯವಾದ ರಸ್ತೆ – ಎಳ್ಳಾರೆ- ಹೊಯಿಗೆಜಡ್ಡು ಜನರಿಂದ ಗ್ರಾಪಂ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಕಾರ್ಕಳ: ಸಂಚಾರಕ್ಕೆ ಅಯೋಗ್ಯವಾದ ರಸ್ತೆಯನ್ನು ಕಂಡು ಎಳ್ಳಾರೆ ಜಡ್ಡಿನ ಜನರು ವಿನೂತನವಾಗಿ ಪ್ರತಿಭಟನೆಗೆ ನಿರ್ಧರಿಸಿದ್ದು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಮಳೆಗಾಲದಲ್ಲಿ ಈ ರಸ್ತೆ ಅವ್ಯವಸ್ಥೆ ಯಿಂದ ಕೂಡಿದ್ದು ಸಂಚರಿಸಲಾಗದೆ ವಾಹನ ಸವಾರರು ತೊಂದರೆಯಿಂದ ಪರಿತಪಿಸುತಿದ್ದರು . ಇದನ್ನು ಗಮನಿಸಿದ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಕೆಂಡಕಾರಿದ್ದಾರೆ .ಗ್ರಾಮ ಪಂಚಾಯತ್ ಚುನಾವಣಾ ಕಾವು ರಂಗೇರುವ ಸಮಯದಲ್ಲಿ ಜನರು ಚುನಾವಣೆಗೆ ಸವಾಲೆಸೆದಿದ್ದು ,ರಸ್ತೆ ವಿರುದ್ಧ ಸಿಡಿದೆಳುವ ಸಾಧ್ಯತೆಗಳಿವೆ .ಬ್ಯಾನರ್ ಅಳವಡಿಸಿ ನೋವನ್ನು ಹೊರಹಾಕಿದ್ದಾರೆ
ನಾಯಕರುಗಳೇ , ನಮ್ಮ ಮತ ಬೇಕು, ನಮ್ಮ ಸಮಸ್ಯೆ ಗಳು ಬೇಡ, ಓಟಿಗಾಗಿ ಇದೇ ದಾರಿಯಲ್ಲಿ ಓಡಾಡುತ್ತೀರಿ , ಆಮೇಲೆ ಈ ದಾರಿಯನ್ನು ಮರೆತೇ ಹೋಗುತ್ತೀರಿ.
ಎಳ್ಳಾರೆ – ಹೊಯಿಗೆಜಡ್ಡು ರಸ್ತೆಯ ಅವ್ಯವಸ್ಥೆ ಬಗ್ಗೆ ಗಮನ ಹೇಗೆ ನಿಮಗಿಲ್ಲವೋ ಹಾಗೆ ನಮಗೆ ಮತ ಹಾಕಬಾರದೆಂದು ನಿರ್ಧಾರ ನಮ್ಮದು. ನಮ್ಮ ಸಮಸ್ಯೆ ಗಳಿಗೆ ಸ್ಪಂದಿಸಿ ಇಲ್ಲವಾದಲ್ಲಿ ಮತಕ್ಕಾಗಿ ಆಗಮಿಸದಿರಿ
ರಸ್ತೆ ಅಭಿವೃದ್ಧಿ ಆಗುವ ವರೆಗೂ ನಮ್ಮ ಹೋರಾಟ ರಸ್ತೆ ಅಭಿವೃದ್ಧಿ ಯಾಗದೆ ಬ್ಯಾನರನ್ನು ಕಿತ್ತು ತೆಗೆದವರು ನಾಯಿ ಮತ್ತು ಕತ್ತೆಗೆ ಸಮಾನ
ಇಂತೀ ನೊಂದ ಗ್ರಾಮಸ್ಥರು ಎಳ್ಳಾರೆ ಎಂದು ಬ್ಯಾನರಿನಲ್ಲಿ ಬರೆಯಲಾಗಿದೆ