Home Mangalorean News Kannada News ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸದಿದ್ದರೆ ಚಾರ್ಜ್ ಶೀಟ್: ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸದಿದ್ದರೆ ಚಾರ್ಜ್ ಶೀಟ್: ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

Spread the love

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸದಿದ್ದರೆ ಚಾರ್ಜ್ ಶೀಟ್: ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ಪ್ರಕರಣ ದಾಖಲಾಗಿರುವ ವಾಹನಗಳ ಮಾಲಕರು ಜು. 15ರೊಳಗೆ ದಂಡ ಪಾವತಿಸಬೇಕು. ತಪ್ಪಿದರೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ತೆಗೆದಿರುವ ಭಾವಚಿತ್ರಗಳನ್ನು ಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿರುವ ಭಾವಚಿತ್ರಗಳನ್ನು ಆಧರಿಸಿ ಪ್ರಕರಣ ದಾಖಲಿಸಿ అంబి ಮೂಲಕ. ನೊಟೀಸ್ ಅನ್ನು ಕಳುಹಿಸಲಾಗಿದೆ. ಆದರೆ ಹಲವಾರು ಮಂದಿ ದಂಡ ಪಾವತಿಸಲು ಬಾಕಿ ಇದೆ.

ಪರಿಶೀಲನೆ ವಿಧಾನ: ವಾಹನ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದೆಯೇ ಎಂಬುದನ್ನು ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಥವಾ ದೂರವಾಣಿ ಕರೆ ಮಾಡಿ ವಿಚಾರಿಸಬಹುದು. ಅಲ್ಲಿಯೇ ದಂಡ ಪಾವತಿಸಬಹುದು. ಮಂಗಳೂರು’ ಸಂಚಾರ ಪೂರ್ವ(ಕದ್ರಿ) ಪೊಲೀಸ್ ಠಾಣೆ(0824-2220523), ಸಂಚಾರ ಪಶ್ಚಿಮ (ಪಾಂಡೇಶ್ವರ) ಠಾಣೆ (0824-2220524), ಸಂಚಾರ ಉತ್ತರ (ಬೈಕಂಪಾಡಿ) ಠಾಣೆ (0824-2220833), ಸಂಚಾರ ದಕ್ಷಿಣ (ಜಪ್ಪಿನಮೊಗರು) ಠಾಣೆ, ಸಂಚಾರ ಪೊಲೀಸ್ಟ್ ಎಸಿಪಿ ಕಚೇರಿ (ಪಾಂಡೇಶ್ವರ) (0824-2220823).

ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸ್ ಅಧಿಕಾರಿಗಳಲ್ಲಿ ಇರುವ ಉಪಕರಣಗಳಲ್ಲಿ ನಿಯಮ ಉಲ್ಲಂಘನೆ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿದೆ. ರಾಜ್ಯದಲ್ಲಿರುವ ಯಾವುದೇ ಅಂಚೆ ಕಚೇರಿಯಲ್ಲಿ ವಿಚಾರಿಸಲು ಮತ್ತು ದಂಡ ಪಾವತಿಸಲು ಅವಕಾಶವಿದೆ. ಯಾವುದೇ ಕರ್ನಾಟಕ ವನ್ ಕೇಂದ್ರಕ್ಕೆ ಭೇಟಿ ನೀಡಿ ದಂಡ ಪಾವತಿ ಮಾಡಬಹುದು.

https://www.karnatakaone.gov.in/PoliceCollectionOfFine/Police CollectionOfFine/dGVtYitUZkgvWitkcG1iV0R.JamJWZz09

ವೆಬ್‌ಸೈಟ್/ ಆ್ಯಪ್ ಮೂಲಕ ಲಾಗಿನ್ ಆಗಿ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


Spread the love

Exit mobile version