ಸಂತೆಕಟ್ಟೆ ರೋಬೊ ಸಾಫ್ಟ್ ನಲ್ಲಿ ಬೆಂಕಿ ಅವಘಡ – ಲಕ್ಷಾಂತರ ರೂಪಾಯಿ ನಷ್ಟ

Spread the love

ಸಂತೆಕಟ್ಟೆ ರೋಬೊ ಸಾಫ್ಟ್ ನಲ್ಲಿ ಬೆಂಕಿ ಅವಘಡ – ಲಕ್ಷಾಂತರ ರೂಪಾಯಿ ನಷ್ಟ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರ ಆಶೀರ್ವಾದ್ ಚಿತ್ರಮಂದಿರದ ಬಳಿ ಇರುವ ರೋಬೊ ಸಾಫ್ಟ್ ಕಂಪೆನಿಯಲ್ಲಿ ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ.

ಡಿಸೆಂಬರ್ 11 ರ ಮಧ್ಯರಾತ್ರಿ ರೋಬೊ ಸಾಫ್ಟ್ ಕಂಪೆನಿಯ ಮೊದಲ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಉಡುಪಿ ಅಗ್ನಿ ಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಆಗಮಿಸಿ ಸುಮಾರು 3 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿ ಅನಾಹುತದಿಂದಾಗಿ ಕಟ್ಟಡದ ಒಳಗಡೆ ಇದ್ದ ಕಂಪ್ಯೂಟರ್ ಹಾಗೂ ಇಂಟಿರಿಯರ್ ಹಾಗೂ ಸರ್ವರ್ ರೂಮ್ ಗೆ ಹಾನಯಾಗಿದ್ದು ಸುಮಾರು ರೂ 50 ಲಕ್ಷಕ್ಕೂ ಅಧಿಕ ನಷ್ಠ ಉಂಟಾಗಿರಬಹುದು ಎಂದು ಅಗ್ನಿಶಾಮಕ ದಳದ ಸಿಬಂದಿಗಳು ತಿಳಿಸಿದ್ದಾರೆ.


Spread the love