ಸಂತ ಅಲೋಶಿಯಸ್ ಕಾ. ಹಿ. ಪ್ರಾ. ಶಾಲೆ ಕೊಡಿಯಾಲ್ ಬೈಲ್ ವಾರ್ಷಿಕ ಕ್ರೀಡಾಕೂಟ  

Spread the love

ಸಂತ ಅಲೋಶಿಯಸ್ ಕಾ. ಹಿ. ಪ್ರಾ. ಶಾಲೆ ಕೊಡಿಯಾಲ್ ಬೈಲ್ ವಾರ್ಷಿಕ ಕ್ರೀಡಾಕೂಟ  

ಸಂತ ಅಲೋಶಿಯಸ್ ಕಾ. ಹಿ. ಪ್ರಾ. ಶಾಲೆ ಕೊಡಿಯಾಲ್ ಬೈಲ್ ವಾರ್ಷಿಕ ಕ್ರೀಡಾಕೂಟವು ದಿನಾಂಕ 24/11/2022 ರಂದು ಗುರುವಾರ ಬೆಳಿಗ್ಗೆ9 ಗಂಟೆಗೆ ಸಂತ ಅಲೋಶಿಯಸ್ ಕಾಲೇಜು ಕ್ರೀಡಾಗಂಣದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಾಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸುನಿಲ್ ಬಾಳಿಗ ಲೆಕ್ಕ ಪರಿಶೋಧಕರು ಸಿ.ಎ.ಜಿ ಇಲಾಖೆ ಬೆಂಗಳೂರು ಹಾಗೂ ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ವಂ| ಫಾ| ಮೆಲ್ವಿನ್ ಪಿಂಟೊ S.ಎ ಹಾಗೂ ಶಾಲಾ ಸಂಚಾಲಕರಾದ ವಂ| ಫಾ| ಜೆರಾಲ್ಡ್ ಪುರ್ಟಾಡೊ S.ಎ, ಮುಖ್ಯೋಪಾಧ್ಯಾಯಿನಿ ಜೊಸಿಟ್ಟಾ ನೊರೊನಾ ಹಾಗೂ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಂಗಳ ರೈಯವರು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ನಂತರ ಕ್ರೀಡಾಕೂಟವನ್ನು ಧ್ವಜಾರೋಹಣ ಮಾಡಿ ಮಾತನಾಡಿದ ಮುಖ್ಯ ಅತಿಥಿಗಳು ತಾವು ಸಂಸ್ಥೆಯಲ್ಲಿ ವಿದ್ಯಾಭ್ಯಾಸಮಾಡಿದ ದಿನಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳಿಗೆಕ್ರೀಡೆಯ ಮಹತ್ವವನ್ನು ವಿವರಿಸಿದರು. ಕ್ರೀಡೆಗೆ ಈ ಸಂಸ್ಥೆನೀಡಿದ ಪೆÇ್ರೀತ್ಸಾಹವನ್ನು ಕೊಂಡಾಡಿದರು. ಈ ವಿದ್ಯಾ ಸಂಸ್ಥೆಯಲ್ಲಿತಾನು ಕಲಿತ ಪ್ರತಿಯೊಂದು ಮೌಲ್ಯಗಳುನಾನು ಎತ್ತರಕ್ಕೆ ಏರಲು ಸಾಧ್ಯವಾಯಿತು ಎಂದು ಕತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ರೆಕ್ಟರ್ ವಂ| ಫಾ|ಮೆಲ್ವಿನ್ ಪಿಂಟೊ ಸ್.ಜೆರವರು ಸೋಲು ಗೆಲುವು ಮರೆತು ಕ್ರೀಡಾ ಸ್ಪೂರ್ತಿಯಿಂದ ಆಡಲು ಕರೆನೀಡಿದರು ಕೊನೆಗೆ ಯಾರು ಗೆದ್ದರು ನಾವೇ ಗೆದ್ದಂತೆ ಎಂದರು. ಕಾರ್ಯದಲ್ಲಿ ಪ್ರದರ್ಶಿತವಾದ ಕವಾಯತ್ತು ಎಲ್ಲರಗಮನ ಸೆಳೆಯಿತು. 5ನೇ ತರಗತಿಯ ವಿದ್ಯಾರ್ಥಿಗಳಿಂದ ನಡೆದ ಡಿಸ್ ಪ್ಲೇ ಎಲ್ಲರನ್ನು ರಂಜಿಸಿತು. ಗಣ್ಯರು ಬೆಲೂನುಗಳನ್ನು ಹಾರಿಸಿ ಕ್ರೀಡಾ ಕೂಟಕ್ಕೆ ಶಿಕ್ಷಕ ರಕ್ಷಕ ಸರ್ವ ಸದಸ್ಯರು ಪೆÇೀಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಮುಖ್ಯೋಪಾಧ್ಯಾಯಿನಿ ಜೊಸಿಟ್ಟಾ ನೊರೊನಾರವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಚಿತ್ರ ಕಿಣಿ ಎಲ್ಲರಿಗೂ ವಂದಿಸಿದರು. ಹಾಗೂ ಶ್ರೀಮತಿ ಸೆಲೆಸ್ತಿನ್ ವಾಸ್‍ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.


Spread the love