ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ಎರಡನೇ ದಿನದ ನೊವೆನ

Spread the love

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ಎರಡನೇ ದಿನದ ನೊವೆನ

ಮಂಗಳೂರು: ಸಂತ ಜೋಸೆಫರ ಗುರುಮಠ ಜೆಪ್ಪು ಇಲ್ಲಿಯ ಆತ್ಮೀಕ ನಿರ್ದೇಶಕರಾದ ಫಾ. ಫ್ರಾನ್ಸಿಸ್ ಡಿಸೋಜರವರು ಎರಡನೇ ದಿನದ ಬಲಿಪೂಜೆ ಅರ್ಪಿಸಿದರು. ಹಿರಿಯ ನಾಗರಿಕರು ಮತ್ತು ಕಾಯಿಲೆಯಿಂದ ಸಂಕಟ ಪಡುವರಿಗಾಗಿ ಈ ದಿನದ ಪ್ರಾರ್ಥೆನೆಯನ್ನು ಸಲ್ಲಿಸಲಾಯ್ತು.

ಇವತ್ತು ನಾವೇನಾಗಿದ್ದೇವೆಯೋ ಅದು ನಮ್ಮ ಹಿರಿಯರು ನಮಗೆ ನೀಡಿದ ಕೊಡುಗೆ. ವಯಸ್ಸಾದಂತೆ ದೇಹದ ಶಕ್ತಿ ಕಡಿಮೆ ಆಗುವುದು ನೈಸರ್ಗಿಕ ನಿಯಮ. ಹೆತ್ತವರಿಗೆ ವಯಸ್ಸಾದಂತೆ ಮಕ್ಕಳು ಅವರನ್ನು ಕಡೆಗಣಿಸುವುದು ಇವತ್ತಿನ ಪ್ರಪಂಚದಲ್ಲಿ ನಾವು ಕಾಣುತ್ತೇವೆ. ಇದೊಂದು ಕೆಟ್ಟ ಬೆಳವಣಿಗೆ. ವಯಸ್ಸಾದವರ ಮತ್ತು ಕಾಯಿಲೆಯಿಂದ ಸಂಕಟ ಪಡುವವರ ನೆರವಿಗೆ ಬರುವುದು ಮಾನವೀಯತೆಯ ಗುಣ-ಲಕ್ಷಣ. ಈ ಗುಣ-ಲಕ್ಷಣ ಸದಾ ನಮ್ಮದಾಗಲಿ. ಹಿರಿಯರಿಗೆ ನೀಡಿದ ಗೌರವ ದೇವರಿಗೆ ಸಲ್ಲಿಸುವ ಭಕ್ತಿಯಾಗಿದೆ. ರೋಗ ಭಾದೆಯಲ್ಲಿದವರ ನೆರವಿಗೆ ಧಾವಿಸುವುದೆಂದರೆ ಅವರಲ್ಲಿ ದೇವರನ್ನು ಕಾಣುವುದೆಂರ್ಥ ಎಂದು ಫಾ. ಡಿಸೋಜರವರು ತಿಳಿಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಫಾ. ಆಲ್ಬನ್ ರೊಡ್ರಿಗಸ್ರವರು ನೊವೇನ ಪ್ರಾರ್ಥನೆ ನಡೆಸಿ ಕೊಟ್ಟರು. ‘ಬ್ಲೂ ಬರ್ಡ್ಸ್’ ಇವರು ಗೀತೆಗಳನ್ನು ಹಾಡಿ ದಿನದ ಭಕ್ತಿ ಕಾರ್ಯಕ್ರಮ ನಡೆಸಿಕೊಡಲು ಮುಂದಾಳತ್ವ ವಹಿಸಿದರು.


Spread the love