ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಐದನೇ ದಿನದ ನೊವೆನ

Spread the love

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಐದನೇ ದಿನದ ನೊವೆನ

ಪವಿತ್ರ ಶಿಲುಬೆ ದೇವಾಲಯ ಕುಲ್ಶೇಕರ ಇಲ್ಲಿಯ ಸಹಾಯಕ ಧರ್ಮಗುರು ಫಾ.ಶಾನ್‍ ರೊಡ್ರಿಗಸ್‍ರವರು ಐದನೇ ದಿನದ ಬಲಿಪೂಜೆ ಅರ್ಪಿಸಿದರು. ಇವತ್ತಿನ ಬಲಿಪೂಜೆಯನ್ನು ಬಂಧನದಲ್ಲಿದ್ದವರಿಗಾಗಿ ಅರ್ಪಿಸಲಾಯ್ತು.

ಸಂತ ಆಂತೋನಿಯವರು ಯೇಸು ನಾಮದಲ್ಲಿ ನಿರಪರಾಧಿಗಳ ರಕ್ಷಣೆ ಮಾಡಿದ್ದರು. ಇವತ್ತು ಪ್ರಪಂಚದ ಆನೇಕ ಕಡೆಗಳಲ್ಲಿ, ಆನೇಕ ಕಾರಾಗೃಹಗಳಲ್ಲಿ ಅದೆಷ್ಟೋ ಮಂದಿ ಸಂಕಷ್ಟದಲ್ಲಿರುವುದನ್ನು ಕಾಣುತ್ತೇವೆ. ಸಂತ ಆಂತೋನಿಯವರು ಅವರಿಗಾಗಿ ಯೇಸುಸ್ವಮಿಯಲ್ಲಿ ಕೋರಿ ಅವರ ರಕ್ಷಣೆ ಮಾಡಲಿ, ಅವರಿಗೆ ಸ್ವತಂತ್ರ ಜೀವನ ಜೀವಿಸುವ ಭಾಗ್ಯ ನೀಡಲೆಂದು ಪ್ರಾರ್ಥಿಸುವ ಎಂದು ಕರೆ ನೀಡಿದರು

ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜರವರು ನೊವೇನ ಪ್ರಾರ್ಥನೆ ನಡೆಸಿ ಕೊಟ್ಟರು.ಬಜ್ಜೋಡಿ ಮಾತೆ ಮೇರಿಗೆ ಸಮರ್ಪಿಸಲ್ಪಟ್ಟ ದೇವಾಲಯದ ಗಾಯನ ಮಂಡಳಿ ಗೀತೆಗಳನ್ನು ಹಾಡಿ ದಿನದ ಭಕ್ತಿ ಕಾರ್ಯಕ್ರಮ ನಡೆಸಿಕೊಡಲು ಮುಂದಾಳತ್ವ ವಹಿಸಿದರು.


Spread the love