ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬದ ಪ್ರಯುಕ್ತ ಒಂಬತ್ತನೇ ದಿನದ ನವೇನಾ

Spread the love

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬದ ಪ್ರಯುಕ್ತ ಒಂಬತ್ತನೇ ದಿನದ ನವೇನಾ

ಮಂಗಳೂರು: ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬದ ಪ್ರಯುಕ್ತ ಜೆಪ್ಪು ಸೈಂಟ್ ಜೋಸೆಫ್ ವರ್ಕ್ಶಾಪ್ನ ಸಹಾಯಕ ವ್ಯವಸ್ಥಾಪಕ ಫಾ. ಸ್ಟಾನಿ ಪಿಂಟೊ ಒಂಬತ್ತನೇ ದಿನದ ಬಲಿಪೂಜೆ ಅರ್ಪಿಸಿದರು. ಈ ಬಲಿಪೂಜೆಯನ್ನು ನಿರೋದ್ಯೋಗಿಗಳಿಗಾಗಿ ಅರ್ಪಿಸಲಾಯಿತು.

ಪ್ರಪಂಚದಲ್ಲಿ ಆನೇಕ ಮಂದಿ ವಿದ್ಯೆ ಪಡೆದರೂ ನಿರುದ್ಯೋಗಿಗಳಾಗಿ ಇರುವುದನ್ನು ಕಾಣುತ್ತೇವೆ. ಕಳೆದ ವರ್ಷದಿಂದ ಕೋವಿಡ್ನಿಂದಾಗಿ ವಿದ್ಯಾವಂತ ಯುವಕರು ಕೆಲಸ ಇಲ್ಲದೆ ಇರುವುದರ ಜೊತೆಗೆ ವ್ಯಾಪಾರ-ವಹಿವಾಟು ಕುಸಿದು ಬೀಳುವುದರ ಕಾರಣ ಉದ್ಯೋಗದಲ್ಲಿದ್ದವರು ಕೂಡ ಕೆಲಸ ಕಳೆದುಕೊಂಡಿದ್ದಾರೆ. ಇದರಿಂದಾಗಿ ಅನೇಕ ಜನರ ಜೀವನ ಕಷ್ಟಮಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕುಟುಂಬ ನಡೆಸಿಕೊಂಡು ಹೋಗುವುದು ಕಷ್ಟಸಾಧ್ಯವಾಗಿದೆ. ಸಂತ ಆಂತೋನಿಯವರ ಕೋರಿಕೆಯ ಮೇರೆಗೆ ನಿರುದ್ಯೋಗಿಗಳ ಕಷ್ಟ ಪರಿಹಾರವಾಗಲೆಂದು ಪ್ರಾರ್ಥಿಸೋಣ ಎಂಬ ಸಂದೇಶವನ್ನು ಫಾ. ಸ್ಟಾನಿ ನೀಡಿದರು.

ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜ ‘ನೊವೇನ’ ಪ್ರಾರ್ಥನೆ ನಡೆಸಿಕೊಟ್ಟರು.


Spread the love