ಸಂತ ಆಂತೋನಿ ಆಶ್ರಮ ಜೆಪ್ಪು – ಎಂಟನೇ ದಿನದ ನೊವೇನ ಪ್ರಾರ್ಥನೆ

Spread the love

ಸಂತ ಆಂತೋನಿ ಆಶ್ರಮ ಜೆಪ್ಪು – ಎಂಟನೇ ದಿನದ ನೊವೇನ ಪ್ರಾರ್ಥನೆ

ಮಂಗಳೂರು ಧರ್ಮಪ್ರಾಂತ್ಯದ ಕುಟುಂಬ ಸೇವಾ ಕೇಂದ್ರದ ನಿರ್ದೇಶಕರಾದ ವಂ. ಫಾ. ಅನಿಲ್ ಆಲ್ಫೆçಡ್ ಡಿ’ಸೋಜರವರು ಸಂತ ಆಂತೋನಿ ಆಶ್ರಮದಲ್ಲಿ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ನೊವೇನ ಪ್ರಾರ್ಥನೆಯ ಎಂಟನೇ ದಿನದಂದು ಬಲಿಪೂಜೆ ಅರ್ಪಿಸಿ ಪ್ರವಚನ ಮಾಡಿದರು.

ಈ ದಿನದ ವಿಷಯ: ಪತಿ-ಪತ್ನಿಯರ ನೆಮ್ಮದಿ ಜೀವನಕ್ಕೆ ದೇವರ ಆಶೀರ್ವಾದಗಳನ್ನು ಬೇಡುವುದು. ಪ್ರಸ್ತುತ ಸಮಾಜದಲ್ಲಿ ವಿವಾಹ ವಿಚ್ಛೇದಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣ ಸಿಗುತ್ತದೆ. ಇದಕ್ಕೆ ಅದೆಷ್ಟೋ ಕಾರಣಗಳಿವೆ. ಅವುಗಳಲ್ಲಿ ಒಂದೆಂದರೆ ಇಬ್ಬರ ನಡುವೆ ಹೊಂದಾಣಿಕೆ ಇಲ್ಲದಿರುವುದು. ವಿವಾಹ ಎಂಬುದು ಒಂದು ಸಂಸ್ಕಾರ ಕೂಡ ಹೌದು. ಪತಿ-ಪತಿನಿಯರು ಹೊಂದಾಣಿಕೆ, ಸಹನೆಯ ಮುಖಾಂತರ ಈ ಸಂಸ್ಕಾರವನ್ನು ಯಶಸ್ವಿಯಾಗಿ ಜೀವಿಸಲು ಬೇಕಾದ ವರಕೃಪೆಗಳನ್ನು ಸಂತ ಆಂತೊನಿಯವರ ಮುಖಾಂತರ ದೇವರಲ್ಲಿ ಪ್ರಾರ್ಥಿಸುವ ಎಂದು ಫಾ. ಡಿ’ಸೋಜರವರು ಭಕ್ತಾಧಿಗಳಿಗೆ ಕರೆ ನೀಡಿದರು.

ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ರೋಶನ್ ಡಿ’ಸೋಜರವರು ನೊವೇನ ಪ್ರಾರ್ಥನೆ ನಡೆಸಿಕೊಟ್ಟರು.


Spread the love