ಸಂತ ಆಂತೋನಿ ಆಶ್ರಮ ಜೆಪ್ಪು – ಏಳನೇ ದಿನದ ನೊವೇನ ಪ್ರಾರ್ಥನೆ

Spread the love

ಸಂತ ಆಂತೋನಿ ಆಶ್ರಮ ಜೆಪ್ಪು – ಏಳನೇ ದಿನದ ನೊವೇನ ಪ್ರಾರ್ಥನೆ

ಬೆಂದೂರು ಸಂತ ಸೆಬೆಸ್ಟಿಯನ್ ದೇವಾಲಯದ ಸಹಾಯಕ ಧರ್ಮಗುರು ಫಾ. ಆಶ್ವಿನ್ ಕ್ರಾಸ್ತಾರವರು ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ನೊವೇನ ಪ್ರಾರ್ಥನೆಯ ಏಳನೇ ದಿನದಂದು ಬಲಿಪೂಜೆ ಅರ್ಪಿಸಿ ಪ್ರವಚನ ಮಾಡಿದರು.

ಈ ದಿನದ ವಿಷಯ: ಹಸಿದವರಿಗಾಗಿ ಪ್ರಾರ್ಥಿಸುವುದು. ಯೇಸು ಸ್ವಾಮಿಯವರು ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಪವಾಡ ಮಾಡಿ ಸಾವಿರಾರು ಜನರ ಹಸಿವನ್ನು ತಣಿಸಿದರು. ಪವಾಡ ಪುರುಷ ಎಂದೇ ಹೆಸರಾದ ಸಂತ ಆಂತೋನಿಯವರು ಯೇಸುವಿನ ನಾಮದಲ್ಲಿ ಜನರಿಗೆ ಅಗತ್ಯವಿರುವ ಉಪಕಾರಗಳನ್ನು ನೀಡುತ್ತಾರೆ. ಉಪಕಾರ ಲಭಿಸಿದ ಭಕ್ತಾಧಿಗಳು ‘ಸಂತ ಆಂತೋನಿಯವರ ರೊಟ್ಟಿ’ ಎಂಬ ಹೆಸರಿನಲ್ಲಿ ಬಡವರಿಗೆ ದಾನ ನೀಡುತ್ತಾರೆ. ಈ ದಾನದಿಂದ ಎಷ್ಟೋ ಜನರ ಹಸಿವು ನೀಗುತ್ತದೆ. ಪ್ರಸ್ತುತ ಕಾಲದಲ್ಲಿ ‘ಕೋವಿಡ್ ೧೯’ ಇದರ ಪರಿಣಾಮವಾಗಿ ಸಹಸ್ರಾರು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಉದಾರ ಮನಸ್ಸಿನ ವ್ಯಕ್ತಿಗಳಿಂದ, ಸಂಘ-ಸAಸ್ಥೆಗಳಿAದ ಮತ್ತು ಸರಕಾರದ ನೆರವಿನಿಂದ ಬಡವರ ಹಸಿವು ತಣಿಯಲಿ ಎಂದು ಇವತ್ತು ನಾವು ಪ್ರಾರ್ಥಿಸುವ ಎಂದು ಫಾ. ಕ್ರಾಸ್ತಾರವರು ಭಕ್ತಾಧಿಗಳಿಗೆ ಕರೆ ನೀಡಿದರು.

ಇವತ್ತು ಕಥೋಲಿಕ ಪವಿತ್ರ ಧರ್ಮ-ಸಭೆ ಯೇಸುವಿನ ಪುಣ್ಯ ಶರೀರ ಮತ್ತು ರಕ್ತದ ಬಾನುವಾರ ಪಾಲಿಸುತ್ತದೆ. ಇದರ ಅಂಗವಾಗಿ ನೊವೇನ ಪ್ರಾರ್ಥನೆಯ ಬಳಿಕ ಆಶ್ರಮದ ಮೈದಾನದಲ್ಲಿ ಪರಮ-ಪ್ರಸಾದದ ಗೌರಾವಾರ್ಥ ಚಿಕ್ಕ ಮೆರವಣಿಗೆ ನಡೆಸಲಾಯ್ತು.

ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ರೋಶನ್ ಡಿ’ಸೋಜರವರು ನೊವೇನ ಪ್ರಾರ್ಥನೆ ನಡೆಸಿಕೊಟ್ಟರು.


Spread the love