ಸಂತ ಲಾರೆನ್ಸರ ಪುಣ್ಯಕ್ಷೇತ್ರ, ಬೊಂದೆಲ್  ವಾರ್ಷಿಕ ಮಹೊತ್ಸವ – ದಶಮಾನೋತ್ಸವದ ಸಮಾರೋಪ 

Spread the love

ಸಂತ ಲಾರೆನ್ಸರ ಪುಣ್ಯಕ್ಷೇತ್ರ, ಬೊಂದೆಲ್  ವಾರ್ಷಿಕ ಮಹೊತ್ಸವ – ದಶಮಾನೋತ್ಸವದ ಸಮಾರೋಪ  

ಮಂಗಳೂರು: ಸಂತ ಲಾರೆನ್ಸರ ಪುಣ್ಯಕ್ಷೇತ್ರ, ಬೊಂದೆಲ್ ಇದರ ವಾರ್ಷಿಕ ಮಹೊತ್ಸವದ ದಶಮಾನೋತ್ಸವದ ಸಮಾರೋಪದ ಬಲಿಪೂಜೆಯನ್ನು ಆಗಸ್ಟ್ 10, 2021ರಂದು ಮಂಗಳವಾರ ಅತೀ ವಂ| ಡಾ| ಅಲೋಶಿಯಸ್ ಪಾವ್ಲ್ ಡಿಸೋಜ (ನಿವೃತ್ತ ಧರ್ಮಾಧ್ಯಕ್ಷರು, ಮಂಗಳೂರು ಪ್ರಾಂತ್ಯ) ನೆರವೇರಿಸಿ, ಪ್ರಭೋಧನೆ ನೀಡಿ, ಸಂತ ಲಾರೆನ್ಸರು ದೇವರಲ್ಲಿ ವಿಶ್ವಾಸ ಮತ್ತು ಪ್ರೀತಿಯಿಂದ ಜೀವನ ನಡೆಸಿ ಜನತೆಗೆ ಸಾಕ್ಷಿಯಾಗಿದ್ದಾರೆ. ಜನರು ದೇವರಿಂದ ಉಪಕಾರ ಪಡೆದು ನಂತರ ಅವರನ್ನು ಮರೆಯುತ್ತಾರೆ ಮತ್ತು ಸಂಕಷ್ಟ ಬಂದಾಗ ಪುನಃಹ ಜನರು ದೇವರ ಮೊರೆ ಹೋಗುತ್ತಾರೆ. ಇದು ಮನುಷ್ಯನ ಸ್ವಭಾವವಾಗಿದೆ. ನಾವು ದೇವರ ಬಳಿಗೆ ಪ್ರಾರ್ಥನೆ ಮಾಡಲು ಹೋಗುವಾಗ ಎಣ್ಣೆ ಇಲ್ಲದ ದೀಪವನ್ನು ಬೆಳಗಿಸಲು ಆಗುವುದಿಲ್ಲ, ಎಣ್ಣೆ ಇದ್ದ ದೀಪವನ್ನು ಬೆಳಗಿರಬೇಕು. ಆಗ ಮಾತ್ರ ನಮ್ಮ ಜೀವನ ಜ್ಯೋತಿಯಾಗಿರುತ್ತದೆ. ಪ್ರತುಯೊಬ್ಬರಿಗೆ ಬೆಳಕನ್ನು ನೀಡುತ್ತದೆ. ನಾವೆಲ್ಲರೂ ದೇವರಿಗೆ ಶ್ರೀಮಂತ, ಬಡವರು ಅವರ ಆಸ್ತಿಯಾಗಿದೆ. ಅವರು ಎಲ್ಲರಿಗೂ ಒಂದೇ ಸಮನೆಯಿಂದ ಆಶೀರ್ವಾದಿಸಿರುತ್ತಾರೆ ಎಂದು ಧರ್ಮಾಧ್ಯಕ್ಷರು ಸಂದೇಶ ನೀಡಿದರು.

ಹಬ್ಬದ ಪೂರ್ವ ತಯಾರಿಯಾಗಿ 9 ದಿನಗಳ ನವೆನಾ ಬಲಿಪೂಜೆಯನ್ನು ವಿವಿಧ ಧರ್ಮಗುರುಗಳು ಸಲ್ಲಿಸಿದರು. “ಯೇಸುವೆ ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ” ಈ ವರ್ಷದ ಪ್ರಮುಖ ವಿಷಯವಾಗಿದ್ದು, “ಕಷ್ಟ- ಸಂಕಷ್ಟದ ಸಮಯದಲ್ಲಿ, ಸಂತ ಲಾರೆನ್ಸರಂತೆ ನಾವು ನಮ್ಮ ವಿಶ್ವಾಸವನ್ನು ಧ್ರಡಗೊಳಿಸೋಣ” ಎಂಬ ಸಂದೇಶವಾಗಿದೆ.
ಸಂಜೆಯ ಸಮಾರೋಪದ ಹಬ್ಬದ ಬಲಿಪೂಜೆಯನ್ನು ಅ| ವಂ| ಜೇಮ್ಸ್ ಪಿಯುಸ್ ಡಿಸೋಜ (ಕಾರ್ಮೆಲ್ ಸಭೆಯ ಪ್ರಾಂತ್ಯಾಧಿಕಾರಿ) ನೆರವೇರಿಸಿ ಪ್ರಬೋಧನೆ ನೀಡಿದರು.

ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವಂ| ಆ್ಯಂಡ್ರ್ಯೂ ಲಿಯೊ ಡಿಸೋಜ, ಸಹಯಕ ಧರ್ಮ ಗುರುಗಳಾದ ವಂ| ರೂಪೇಶ್ ತಾವ್ರೊ, ವಂ| ಪೀಟರ್ ಗೊನ್ಸಾಲ್ವಿಸ್, ಧರ್ಮ ಕೇಂದ್ರದ ಶ್ರೇಷ್ಟ ಧರ್ಮಗುರು ಅ| ವಂ| ಜೇಮ್ಸ್ ಡಿಸೋಜ, ದೇವಾಲಯದ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಶ್ರೀ ರೆಜಿನಾಲ್ಡ್ ಡಿಸೋಜ, ಕಾರ್ಯದರ್ಶಿ ಶ್ರೀ ಸ್ಟೀವನ್ ನೊರೊನ್ಹ, ಸಂಚಾಲಕರಾದ ಪ್ರಕಾಶ್ ಪಿಂಟೊ, ಪ್ರಚಾರ ಸಮಿತಿಯ ಮುಖ್ಯಸ್ಥರಾದ ಸ್ಟ್ಯಾನಿ ಅಲ್ವಾರಿಸ್ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಬೊಂದೇಲ್ ದೇವಾಲಯದ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಹಬ್ಬವನ್ನು ಸರಳ ರೀತಿಯಿಂದ ಆಚರಿಸಲಾಯಿತು. ವಂ| ಆ್ಯಂಡ್ರ್ಯೂ ಲಿಯೊ ಡಿಸೋಜ ಧನ್ಯವಾದ ವಿತ್ತರು.

ದೇವಾಲಯದಲ್ಲಿ ಕೋವಿಡ್-19 ನಿಯಮಾವಳಿಗಳನ್ನು (ಮಾಸ್ಕ್ ಹಾಗೂ ಸಾಮಾಜಿಕ ಅಂತರ) ಪಾಲಿಸಲಾಯಿತು.


Spread the love