ಸಂತ ಲೋರೆನ್ಸ ರ ಪುಣ್ಯಕ್ಷೇತ್ರ, ಬೊಂದೆಲ್‍ನಲ್ಲಿ ಬಲಿಪೂಜೆಗಳು ಮತ್ತು ನೊವೆನ-ಪ್ರಾರ್ಥನೆಗಳು ಪುನಾರಂಭ

Spread the love

ಸಂತ ಲೋರೆನ್ಸ ರ ಪುಣ್ಯಕ್ಷೇತ್ರ, ಬೊಂದೆಲ್‍ನಲ್ಲಿ ಬಲಿಪೂಜೆಗಳು ಮತ್ತು ನೊವೆನ-ಪ್ರಾರ್ಥನೆಗಳು ಪುನಾರಂಭ

ಕೊವಿಡ್ 19 ರೋಗದಿಂದ ಸ್ಥಗಿತಗೊಂಡಿದ್ದ ಸಂತ ಲೋರೆನ್ಸರರ ನೋವೆನವು ಮಂಗಳವಾರ, ಜನವರಿ 5 ರಂದು ಪುನಾರಂಭಗೊಂಡಿತು.

ಬೆಳಗ್ಗೆ 10.30 ಗೇ ಪರಮ ಸಂಸ್ಕಾರದ ಆರಾಧನೆಯೊಂದಿಗೆ ಪ್ರಾರಂಭವಾಯಿತು. ಮುಲ್ಕಿ ಡಿವೈನ್ ರಿಟ್ರಿಟ್ ಸೆಂಟರ್ ಇದರ ಧರ್ಮಗುರು ವಂದನೀಯ ಅನಿಲ್ ಫೆರ್ನಾಂಡಿಸ್, ಎಸ್.ವಿ.ಡಿ ಆರಾಧನೆ ನೇರವೇರಿಸಿ ದಿವ್ಯಬಲಿಪೂಜೆಯನ್ನು ನೇರವೇರಿಸಿದರು.

ಬೊಂದೆಲ್ ಚರ್ಚ್ನ ಧರ್ಮಗುರುಗಳು ವಂದನೀಯ ಆಂಡ್ರ್ಯೂ ಲಿಯೋ, ವಂದನೀಯ ರೂಪೇಶ್ ತಾವ್ರೊ ಹಾಗೂ ನೂರಾರು ಭಕ್ತಾದಿಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಎಲ್ಲಾ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಾರ್ಥನಾ ವಿಧಿಗಳಲ್ಲಿ ಕೊರೋನಾ ನಿಮಿತ್ತ ಇರುವ ಕಾನೂನುಗಳನ್ನು ಪಾಲಿಸಿದರು.


Spread the love