
ಸಂವಿಧಾನವನ್ನು ಬದುಕಿಗಾಗಿ ಓದಿ: ಪ್ರಶಾಂತ ಎಂ. ಡಿ- ಆಳ್ವಾಸ್ ಪ ಪೂ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ
ಮೂಡುಬಿದಿರೆ: ಸಂವಿಧಾನ ನಮ್ಮ ದೇಶದ ಅತ್ಯುನ್ನತ ಪವಿತ್ರ ಗ್ರಂಥ. ನಾವು ಸಂವಿಧಾನವನ್ನು ಪಾಲನೆ ಮಾಡದೇ ಇದ್ದರೆ, ಶ್ರೇಷ್ಠ ಗ್ರಂಥಕ್ಕೆ ಅಗೌರವ ನೀಡಿದಂತೆ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ. ಡಿ ನುಡಿದರು.
ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಕಲಾ ಸಂಘ ಮತ್ತು ಚುನಾವಣಾ ಸಾಕ್ಷರತಾ ಸಂಘದ ಸಹಯೋಗದಲ್ಲಿ ನಡೆದ “ಸಂವಿಧಾನ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಅಂಕಕ್ಕಾಗಿ ಓದಿದರೆ ಪರೀಕ್ಷೆ ಮುಗಿದ ಬಳಿಕ ಓದಿದ್ದು ನೆನಪಿನಲ್ಲಿ ಉಳಿಯುದಿಲ್ಲ, ಹಾಗಾಗಿ ಅಂಕಕ್ಕಾಗಿ ಮಾತ್ರ ಸೀಮಿತವಾಗಿರದೆ ಬದುಕಿಗಾಗಿ ಓದಿ. ಸಮಾಜ ಹಾಗೂ ಸರ್ಕಾರ ದೇಶದ ಅಭಿವೃದ್ಧಿಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಸಂವಿಧಾನದಲ್ಲಿ ಹೇಳಲಾಗಿದೆ. ಅದನ್ನು ಪಾಲಿಸಿದಾಗ ದೇಶದ ಪ್ರಗತಿ ಸಾಧ್ಯ. ಪ್ರತಿಯೊಬ್ಬರು ತಮ್ಮ ಒಳಿತಿಗಾಗಿ ಹಾಗೂ ಮುಂದಿನ ಪೀಳಿಗೆಗಾಗಿ ಸಂವಿಧಾನವನ್ನು ರಕ್ಷಿಸುತ್ತಾ ಮುಂದಾಗಬೇಕು ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನದ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಪ್ರಾರಂಭಿಸಿಲಾಯಿತು. ನಂತರ ಸಂವಿಧಾನ ಪೀಠಿಕೆ ಪಠಣ ಮಾಡಲಾಯಿತು. ಪ್ರಥಮ ವರ್ಷದ ಕಲಾ ವಿದ್ಯಾರ್ಥಿಗಳಿಂದ ಸಂವಿಧಾನ ರಚಿನೆ ಹಾಗೂ ಮಹತ್ವದ ಕುರಿತು ಮೈಮ್ ಪ್ರದರ್ಶನ ನಡೆಯಿತು. ಅಂದ ವಿದ್ಯಾರ್ಥಿಗಳಾದ ವಿಜಯಕುಮಾರ್, ಪೂರ್ಣಚಂದ್ರ ದೇಶಭಕ್ತಿ ಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕ ಸುನಿಲ್, ಕಲಾ ಸಂಘದ ಸಂಯೋಜಕ ದಾಮೋದರ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೇಣುಕಾ ಹಾಗೂ ಚುನಾವಣಾ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕಿರಣ್ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಕಲಾ ವಿದ್ಯಾರ್ಥಿ ಬಸವರಾಜ್ ಸ್ವರೂಪ್ ಸ್ವಾಗತಿಸಿ, ಚಿತ್ತಾರಾ ವಂದಿಸಿ, ದಿಯಾ ಜೈನ್ ನಿರೂಪಿಸಿದರು.