ಸಂಸತ್ ಸ್ಥಾನದಿಂದ ಅನರ್ಹಗೊಂಡ ರಾಹುಲ್ ಗಾಂಧಿಗೆ ಸರ್ಕಾರಿ ಬಂಗಲೆ ತೆರವುಗೊಳಿಸಲು ನೋಟೀಸ್

Spread the love

ಸಂಸತ್ ಸ್ಥಾನದಿಂದ ಅನರ್ಹಗೊಂಡ ರಾಹುಲ್ ಗಾಂಧಿಗೆ ಸರ್ಕಾರಿ ಬಂಗಲೆ ತೆರವುಗೊಳಿಸಲು ನೋಟೀಸ್

ನವದೆಹಲಿ: ಲೋಕಸಭೆಯಿಂದ ಅನರ್ಹಗೊಂಡ ನಂತರ ಇದೀಗ ಲೋಕಸಭೆಯ ಹೌಸಿಂಗ್ ಕಮಿಟಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸರ್ಕಾರ ಮಂಜೂರು ಮಾಡಿದ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

2004 ರಲ್ಲಿ ಯುಪಿಯ ಅಮೇಠಿಯಿಂದ ರಾಹುಲ್ ತಮ್ಮ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದಾಗ, ಅವರಿಗೆ ದೆಹಲಿ ಲುಟ್ಯೆನ್ಸ್ನ 12 ತುಘಲಕ್ ಲೇನ್ನಲ್ಲಿರುವ 5 ಬೆಡ್ರೂಮ್ ಬಂಗಲೆಯನ್ನು ನೀಡಲಾಗಿತ್ತು.

ಏತನ್ಮಧ್ಯೆ, ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಲೋಕಸಭೆಯ ಹೌಸಿಂಗ್ ಕಮಿಟಿಯಿಂದ ಈ ನೋಟಿಸ್ ಬಂದಿದೆ.

ಸಂಸದೀಯ ಸ್ಥಾನ ಅನರ್ಹಗೊಂಡಿರುವ ಹಿನ್ನಲೆಯಲ್ಲಿ ಬಂಗಲೆ ತೆರವುಗೊಳಿಸಲು ಸೂಚಿಸಿದ್ದು, ಎಪ್ರಿಲ್ 22 ರ ಒಳಗೆ ಬಂಗಲೆ ತೆರವುಗೊಳಿಸಲು ಕೇಳಲಾಗಿದೆ.


Spread the love