
ಸಂಸದೆಯೊಂದಿಗೆ ಸೆಲ್ಫಿ ಮಿಥುನ್ ರೈ ಹೇಳಿಕೆಗೆ ಯಶ್ ಪಾಲ್ ಸುವರ್ಣ ತಿರುಗೇಟು
ಮಿಥುನ್ ರೈ ಸಂಸದೆ ಶೋಭಾ ಕರಂದ್ಲಾಜೆ ರೊಂದಿಗೆ ಸೆಲ್ಫಿ ಫೋಟೋ ಕಳುಹಿಸಿದರೆ 5 ಸಾವಿರ ಬಹುಮಾನ ಘೋಷಣೆಗೆ ಯಶ್ ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.
ಮಿಥುನ್ ರೈ ಗೆ ನಿಜವಾದ ಸಾಮಾಜಿಕ ಬದ್ಧತೆ ಇದ್ದರೆ ಸಂಸದೆಯೊಂದಿಗೆ ಸೆಲ್ಫಿಗೆ ಬಹುಮಾನ ಘೋಷಿಸುವ ಬದಲು ಪಿ ಎಫ್ ಐ ನಂತಹ ದೇಶ ದ್ರೋಹಿಗಳ ವಿರುದ್ಧ ದಿಟ್ಟ ತನಿಖೆ ನಡೆಸಿ ದೇಶದ್ರೋಹಿಗಳ ಮುಖವಾಡ ಬಯಲಿಗೆಳೆದು ಸಂಘಟನೆ ನಿಷೇಧಕ್ಕೆ ಪೂರಕ ಸಾಕ್ಷ್ಯಾಧಾರ ಸಂಗ್ರಹಿಸಿದ ಎನ್ ಐ ಎ ಗೆ ಬಹುಮಾನ ನೀಡಲಿ ಎಂದರು.
ಶೋಭಾ ಕರಂದ್ಲಾಜೆ ಸಂಸದರಾಗಿ ಸಮರ್ಥವಾಗಿ ಉತ್ತಮ ಕೆಲಸದಲ್ಲಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಇವರ ಕಾರ್ಯವೈಖರಿ ಗುರುತಿಸಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಮಹತ್ವದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಜವಾಬ್ದಾರಿ ನೀಡಿ ಪಕ್ಷ ಅವಕಾಶ ನೀಡಿದೆ.
ಸಂಸದರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮಾಡುವ ಬದಲು ಮತೀಯವಾದಿ ರಾಷ್ಟ್ರವಿರೋಧಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಕೇಸ್ ಹಿಂಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.