
ಸಂಸದೆ ಶೋಭಾ ಕರಂದ್ಲಾಜೆ ಸುಳ್ಳು ಹೇಳಿಕೆ ಪುಕ್ಕಟೆ ಪ್ರಚಾರ : ಜೆಡಿಎಸ್ ಖಂಡನೆ
ಮಂಗಳೂರು: ಚರ್ಚ್ಗಳಲ್ಲಿ ವ್ಯಾಕ್ಸಿನ್ ಹಾಕಿಸಬಾರದು ಎಂದು ಸುಳ್ಳು ಹೇಳಿಕೆಯನ್ನು ನೀಡಿ ಪುಕ್ಕಟೆ ಪ್ರಚಾರ ಬಯಸುವ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತದಳ ಖಂಡೀಸುತ್ತದೆ. ಕೊರೋನವನ್ನು ನಿಯಂಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಯಂತ್ರಿಸಲು ವಿಫಲರಾದರೂ ಎಲ್ಲಾ ರಾಜ್ಯಕೀಯ ಪಕ್ಷಗಳು ಹಾಗೂ ಎಲ್ಲ ಸರ್ವ ಧರ್ಮದವರು ಸರಕಾರದೊಡನೆ ಕೈ ಜೋಡಿಸಿ ಸಹಾಯ ಹಸ್ತವನ್ನು ನಿಡುತ್ತಾ ಬಂದಿದ್ದಾರೆ.
ಆದರೆ ಈ ಸಂದರ್ಭದಲ್ಲಿ ಒಬ್ಬ ಜವಬ್ದಾರಿಯುತ ಜನಪ್ರತಿನಿಧಿಯಾಗಿ ಕ್ರೈಸ್ತ ಸಮುದಾಯದವರು ಚರ್ಚುಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬಾರದೆಂದು ಪ್ರಚಾರ ಮಾಡುತ್ತಿವೆ ಎಂಬ ಹೇಳಿಕೆ ಅವರ ಬೇಜವಬ್ದಾರಿಯನ್ನು ಎತ್ತಿ ತೋರಿಸುತ್ತದೆ . ಕೇಂದ್ರ ಹಾಗೂ ರಾಜ್ಯ ಸರಕಾರ ತಮ್ಮದೇ ಆಡಳಿತವಿರುವಾಗ ತಮ್ಮ ಕ್ಷೇತ್ರದಲ್ಲಿ ಯಾವ ಚರ್ಚುಗಳಲ್ಲಿ ಇಂತ ಹೇಳಿಕೆ ನೀಡಿದೆ ಎಂಬುದನ್ನು ತನಿಖೆ ನಡೆಸಿ ಸಾಬೀತು ಪಡೆಸಬೇಕು.ಇಲ್ಲವಾದಲ್ಲಿ ತಾವು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಅನರ್ಹರು. ತಾವು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷರಾದ ವಸಂತ್ ಪುಜಾರಿ ಹಾಗೂ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.