ಸಂಸದ ಸ್ಥಾನದಿಂದ ಅನರ್ಹತೆಯ ಮೂಲಕ ರಾಹುಲ್ ಬಾಲಿಶ ಹೇಳಿಕೆಗಳಿಗೆ ತಕ್ಕ ಶಾಸ್ತಿ : ಯಶ್ಪಾಲ್ ಸುವರ್ಣ

Spread the love

ಸಂಸದ ಸ್ಥಾನದಿಂದ ಅನರ್ಹತೆಯ ಮೂಲಕ ರಾಹುಲ್ ಬಾಲಿಶ ಹೇಳಿಕೆಗಳಿಗೆ ತಕ್ಕ ಶಾಸ್ತಿ : ಯಶ್ಪಾಲ್ ಸುವರ್ಣ

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೋದಿ ಉಪನಾಮ ಇರುವವರೆಲ್ಲ ಕಳ್ಳರು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯ 2 ವರ್ಷಗಳ ಶಿಕ್ಷೆ ವಿಧಿಸುವ ಮೂಲಕ ರಾಹುಲ್ ಗಾಂಧಿಯ ಅಪ್ರಬುದ್ಧ ಬಾಲಿಶ ಹೇಳಿಕೆ ಮತ್ತು ಹಿಂದುಳಿದ ವರ್ಗಗಳ ನಾಯಕರನ್ನು ತೆಗಳುವ ನಿಲುವಿಗೆ ತಕ್ಕ ಶಾಸ್ತಿ ಮಾಡಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಕಳೆದ 65 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗ ಮತ್ತು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ನೀಡದೆ ನಿರಂತರವಾಗಿ ಸುಳ್ಳು ಭರವಸೆಗಳನ್ನು ನೀಡಿ ಓಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದೆ.

ಇದೀಗ ಹಿಂದುಳಿದ ವರ್ಗ ಮತ್ತು ದಲಿತರು ನರೇಂದ್ರ ಮೋದಿಯವರ ನಾಯಕತ್ವಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದರಿಂದ ಹತಾಶೆಗೊಂಡ ಕಾಂಗ್ರೆಸ್ ಪ್ರಧಾನಿ ಮೋದಿ ಸಹಿತ ಹಿಂದುಳಿದ ವರ್ಗದವರನ್ನು ಕಳ್ಳನಿಗೆ ಹೋಲಿಕೆ ಮಾಡುವ ಮೂಲಕ ಹಿಂದುಳಿದ ವರ್ಗಗಳ ಬಗ್ಗೆ ರಾಹುಲ್ ತನಗಿರುವ ಧೋರಣೆಯನ್ನು ಪ್ರದರ್ಶಿಸಿದ್ದಾರೆ.

ರಾಹುಲ್ ಗಾಂಧಿ ಅನರ್ಹತೆಯ ಮೂಲಕ ಕಾಂಗ್ರೆಸ್ ಪಕ್ಷ ದೇಶದ ಜನತೆ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನಕ್ಕೆ ತಕ್ಕ ಶಾಸ್ತಿಯಾಗಿದ್ದು, ಹತಾಶ ಸ್ಥಿತಿಯಲ್ಲಿ ದೇಶದಾದ್ಯಂತ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನತೆ ಮತ್ತೊಮ್ಮೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love