ಸಂಸದ ಸ್ಥಾನದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ – ವೆರೋನಿಕಾ ಕರ್ನೆಲಿಯೊ

Spread the love

ಸಂಸದ ಸ್ಥಾನದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ – ವೆರೋನಿಕಾ ಕರ್ನೆಲಿಯೊ

ಉಡುಪಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಅಭಿಪ್ರಾಯಪಟ್ಟಿದ್ದಾರೆ.

ಮೋದಿಯವರನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಒರ್ವ ಜನರಿಂದ ಆಯ್ಕೆಗೊಂಡ ಸಂಸದರನ್ನು ಅಮಾನತುಗೊಳೀಸುತ್ತಾರೆ ಎಂದರೆ ಈ ಹಿಂದೆ ಹಲವು ಬಾರಿ ಹಲವು ಬಿಜೆಪಿ ಪಕ್ಷದ ನಾಯಕರು ಕೂಡ ಟೀಕಿಸಿದ ಅನೇಕ ಉದಾಹರಣೆಗಳಿವೆ. ಅವರೆಲ್ಲರನ್ನು ಹೀಗಿಯೇ ಅಮಾನತು ಮಾಡುತ್ತಾ ಹೋದರೆ ಮುಂದೊಂದು ದಿನ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಇವರ ಪಕ್ಷದವರು ಸಂಪೂರ್ಣ ಖಾಲಿಯಾಗಬೇಕಾಗಿತ್ತು.

ನರೇಂದ್ರ ಮೋದಿಯವರು ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ವಾಕ್ ಸ್ವಾತಂತ್ರ್ಯ ಎಂಬ ಪದ ಸಂಪೂರ್ಣವಾಗಿ ಅರ್ಥ ಕಳೆದುಕೊಂಡಿದೆ. ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನವಿರೋಧಿ ನೀತಿಗಳನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಪರಿಣಾಮಕಾರಿಯಾಗಿ ಪ್ರತಿಭಟಿಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ನ್ಯಾಯಾಲಯದ ತೀರ್ಪು ಬಂದ ಒಂದೇ ದಿನದಲ್ಲಿ ಮೇಲಿನ ನ್ಯಾಯಾಲಯಕ್ಕೆ ಮನವಿ ಮಾಡಲೂ ಕೂಡ ಅವಕಾಶ ನೀಡದೆ ರಾಹುಲ್ ಅವರನ್ನು ಅಮಾನತು ಮಾಡಿರುವ ಸರಕಾರದ ಕ್ರಮ ಖಂಡನೀಯ. ಅಭಿವೃದ್ಧಿಯ ವಿಚಾರ ಬಿಟ್ಟು, ದ್ವೇಷ ರಾಜಕಾರಣ ಮಾಡುವುದರಲ್ಲಿ ಬಿಜೆಪಿ ಪಕ್ಷ ಎಷ್ಟೊಂದು ವೇಗವಾಗಿದೆ ಎನ್ನುವುದು ಇದರಿಂದ ತಿಳಿಯುತ್ತದೆ.

ರಾಹುಲ್ ಗಾಂಧಿಯವರು ಅದಾನಿ ವಿಷಯ ಎತ್ತಿದಾಗಿನಿಂದ ಮೋದಿಯವರ ಸರಕಾರವು ಅವರ ಮೇಲೆ ದ್ವೇಷ ಸಾಧಿಸುತ್ತಿದೆ. ಮೋದಿ ಸರಕಾರದ ದ್ವೇಷದ ರಾಜಕಾರಣದ ಇನ್ನೊಂದು ಉದಾಹರಣೆ ಇದು. ಕಾಂಗ್ರೆಸ್ ಪಕ್ಷ ಇದಕ್ಕೆಲ್ಲ ತಲೆ ಬಾಗುವುದಿಲ್ಲ, ಬದಲಾಗಿ ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ದ ಎಲ್ಲಾ ಬಗೆಯ ಪ್ರತಿ ಹೋರಾಟ ನಡೆಸುತ್ತದೆ. ದೇಶದ ಜನರೂ ಕೂಡ ಇವರ ಜನವೀರೋಧಿ ನೀತಿಗಳನ್ನು ಹಾಗೂ ದ್ವೇಷ ರಾಜಕೀಯವನ್ನು ಗಮನಿಸುತ್ತಿದ್ದು ಇದಕ್ಕೆಲ್ಲಾ ಸೂಕ್ತವಾದ ಉತ್ತರವನ್ನು ನೀಡುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love