ಸಕಲೇಶಪುರ: ಗೋ ಮಾಂಸ ಮಾರುತ್ತಿದ್ದವರ ಬಂಧನ

Spread the love

ಗೋ ಮಾಂಸ ಮಾರುತ್ತಿದ್ದವರ ಬಂಧನ

ಸಕಲೇಶಪುರ : ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಗಳನ್ನು ಬಂಧಿಸಿರುವ ಘಟನೆ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ.

ಪಟ್ಟಣದ ಕುಶಾಲನಗರದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಗರ ಪಿಎಸ್‌ಐ ಬಸವರಾಜ್ ಚಿಂಚೋಳಿ ನೇತೃತ್ವದ ದಾಳಿ ನಡೆಸಿದ್ದು, ಈ ವೇಳೆ ಮಹಮದ್ ಬಿಲಾಲ್ ಮತ್ತು ಅಹಮದ್ ಪಾಷ ಸಿಕ್ಕಿಬಿದ್ದಿದ್ದು, ಅವರಿಂದ ಮಾರಾಟಕ್ಕೆ ಇಟ್ಟಿದ್ದ 80 ಕೆಜಿ ಗೋ ಮಾಂಸ ವಶಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಆರೋಪಿಗಳು ಬಾಗಿಲು ಹಾಕಿಕೊಂಡಿದ್ದರಿಂದ ಪುರಸಭೆ ಚೀಫ್ ಆಫೀಸರ್ ಸ್ಟೀಫನ್ ಪ್ರಕಾಶ್ ಅವರನ್ನು ಕರೆದು ಬಾಗಿಲು ತೆಗೆದು ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.


Spread the love