ಸಕಾಲ ಸೇವೆಯಲ್ಲಿ ಲೋಪದೋಷ ಬಾರದಂತೆ ಗಮನಹರಿಸಿ

Spread the love

ಸಕಾಲ ಸೇವೆಯಲ್ಲಿ ಲೋಪದೋಷ ಬಾರದಂತೆ ಗಮನಹರಿಸಿ

ಮಂಡ್ಯ: ಅರ್ಜಿಗಳ ಸ್ವೀಕಾರ, ತಿರಸ್ಕಾರ ಮತ್ತು ವಿಲೇವಾರಿ ಮಾಡುವ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಸಕಾಲ ಯೋಜನೆಯಡಿಯಲ್ಲೇ ಅರ್ಜಿಗಳನ್ನು ಸ್ವೀಕರಿಸಬೇಕು ಎಂದು ಅಪರ ಸಕಾಲ ಮಿಷನ್ ನಿರ್ದೇಶಕರಾದ ಮಮತಾ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಕಾಲ ಸಪ್ತಾಹ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು ಅರ್ಜಿಗಳನ್ನು ಸ್ವೀಕರಿಸುವ ಸಂದರ್ಭದಲ್ಲಿಯೇ ಅಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳಬೇಕು. ಸಮರ್ಪಕ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಬಾರದು. ಅರ್ಜಿಗಳ ವಿಲೇವಾರಿ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ ಸಕಾಲದಲ್ಲಿ ಮಂಡ್ಯ ಪ್ರಥಮ ಸ್ಥಾನದಲ್ಲಿ ಮತ್ತು ಭೂಮಿ ಶ್ರೇಣಿಯಲ್ಲಿ ಮೂರನೇ ಸ್ಥಾನದಲ್ಲಿದೆ, ಈ ಸ್ಥಾನಗಳನ್ನು ಉಳಿಸಿಕೊಂಡು ಹೋಗುವುದು ನಮ್ಮ ಎಲ್ಲಾ ಇಲಾಖಾಧಿಕಾರಿಗಳ ಕರ್ತವ್ಯವಾಗಿದೆ ಆದ್ದರಿಂದ ಅಧಿಕಾರಿಗಳು ಜಿಲ್ಲೆಯ ಸಮರ್ಪಕ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ನಮ್ಮ ರಾಜ್ಯದಲ್ಲಿ ಸಕಾಲದಡಿ ವೈಯಕ್ತಿಕ ಸೇವೆಗಳು ಲಭ್ಯವಿದ್ದು, ಜೊತೆಗೆ ಸಾಕಷ್ಟು ಧನಾತ್ಮಕ ಅಂಶಗಳನ್ನು ಈ ಸಕಾಲ ಯೋಜನೆಯು ಹೊಂದಿದೆ ಅದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ. ಸಕಾಲ ಸ್ಥಿತಿಗತಿಗನ್ನು ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ, ದೂರು ತೆಗೆದುಕೊಳ್ಳುವ ಸಮಯದಲ್ಲಿಯೇ ಅರ್ಜಿಗಳನ್ನು ಸರಿಪಡಿಸುವ ವ್ಯವಸ್ಥೆಯನ್ನು ಜಾರಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಾಗೃತ ಆಯೋಗವನ್ನು ಕಳುಹಿಸಿ ನಿರಾಕರಣೆಯ ಬಗ್ಗೆ ವಿಶ್ಲೇಷಣೆಯನ್ನು ವರದಿ ಮಾಡುವಂತೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಓ.ಬಿ.ಸಿ ಇಲಾಖೆ, ಇತರೆ ಇಲಾಖೆಗಳಲ್ಲಿ ಅಭ್ಯರ್ಥಿಗಳು ದಾಖಲಾತಿಯನ್ನು ಸಲ್ಲಿಸಲು ಯಾವುದೇ ಕೊನೆಯ ದಿನಾಂಕವಿಲ್ಲದ ಕಾರಣ ತಡವಾಗಿ ದಾಖಲಾತಿಗಳನ್ನು ತರುತ್ತಾರೆ ಇದನ್ನು ಸರಿಪಡಿಸಲು ಸಕಾಲದಲ್ಲಿ ದಾಖಲಾತಿ ಸಲ್ಲಿಕೆಗೆ ಕಾಲಾವಧಿ ನಿಗದಿ ಮಾಡಿ, ಸಕಾಲ ಸಪ್ತಾಹ ಕೊಡುತ್ತಿರುವ ಸೇವೆ ಕ್ವಾಂಟಿಟಿಯದಾಗಿದ್ಧು, ಕ್ವಾಲಿಟಿ ರೂಪದಲ್ಲಿ ಸೇವೆಯನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ, ಉಪವಿಭಾಗಾಧಿಕಾರಿ ಐಶ್ವರ್ಯ, ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ತುಷಾರಮಣಿ, ಅರಣ್ಯಾಧಿಕಾರಿ ಶಿಲ್ಪ ಹಾಗೂ ಮತ್ತಿತರರು ಹಾಜರಿದ್ದರು.


Spread the love