ಸಖರಾಯಪಟ್ಟಣ: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಹತ್ತು ಮಂದಿ ಬಂಧನ, ರೂ. 3.60 ಲಕ್ಷ ಮೌಲ್ಯದ ಸೊತ್ತು ವಶ

Spread the love

ಸಖರಾಯಪಟ್ಟಣ: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಹತ್ತು ಮಂದಿ ಬಂಧನ, ರೂ. 3.60 ಲಕ್ಷ ಮೌಲ್ಯದ ಸೊತ್ತು ವಶ

ಚಿಕ್ಕಮಗಳೂರು: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಹತ್ತು ಮಂದಿಯನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮುರಳಿ, ಶಿವಯ್ಯ, ಸಿದ್ದೇಶ, ರಂಗನಾಥ, ರಂಜಿತ, ತನು, ಉಮೇಶ, ಮಂಜಾ ನಾಯ್ಕ, ಮಂಜುನಾಥ ಮತ್ತು ರಫೀಕ್ ಎಂದು ಗುರುತಿಸಲಾಗಿದೆ.

ಸಖರಾಯ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚಗೊಂಡನ ಹಳ್ಳಿ ಗೇಟ್ ಮೂಲಕ ಬಾಣವಾರದಿಂದ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಉಪನಿರೀಕ್ಷಕ ಹರೀಶ್ ಆರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಂದ ಒಟ್ಟು ರೂ 89,843 ರೂ ಮೌಲ್ಯದ ಮದ್ಯ ಹಾಗೂ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ಒಟ್ಟು ಮೌಲ್ಯ ರೂ 3,60,000 ಆಗಿರುತ್ತದೆ.

ಕಾರ‍್ಯಾಚರಣೆಯನ್ನು ಜಿಲ್ಲಾ ಎಸ್ಪಿ ಅಕ್ಷಯ್ ಎಮ್ ಹೆಚ್, ಹೆಚ್ಚುವರಿ ಎಸ್ಪಿ ಕುಮಾರಿ ಶೃತಿ, ತರಿಕೆರೆ ಡಿವೈಎಸ್ಪಿ ಏಗನ ಗೌಡರ್, ಕಡೂರು ಉಪನಿರೀಕ್ಷಕ ಮಂಜುನಾಥ್ ಬಿ ಎಸ್ ರವರ ನರ‍್ದೇಶನ ಹಾಗೂ ಮಾರ‍್ಗದರ್ಶನದಲ್ಲಿ ಪಿಎಸ್ ಐ ಹರೀಶ್ ನೇತೃತ್ವದ ತಂಡದ ಸಿಬಂದಿಗಳಾದ ಪುಟ್ಟಸ್ವಾಮಿ, ರಾಜು ಕೆಜಿ, ಪ್ರಕಾಶ್, ಸುರೇಶ್, ಕೇಶವ ಮೂರ‍್ತಿ, ಶ್ರೀನಿವಾಸ್, ಮಹಮ್ಮದ್ ಅಹಮ್ಮದ್, ವಿದ್ಯಾಶಂಕರ ನಾಯ್ಕ್, ಮಧು, ಸುಂದರೇಶ್, ದಿವಾಕರ್, ಪ್ರಭು, ಅರುಣ್ ಕುಮಾರ್, ಕಲ್ಲೇಶಪ್ಪ ಪಾಲ್ಗೊಂಡಿದ್ದರು.


Spread the love