ಸಖರಾಯಪಟ್ಟಣ: ಬಟ್ಟೆ ಬದಲಿಸುವಾಗ ಅಪ್ರಾಪ್ತೆಯ ವಿಡಿಯೋ ಮಾಡಿ ಬೆದರಿಸಿ  ನಿರಂತರ ಅತ್ಯಾಚಾರ; ಇಬ್ಬರ ಬಂಧನ

Spread the love

ಸಖರಾಯಪಟ್ಟಣ: ಬಟ್ಟೆ ಬದಲಿಸುವಾಗ ಅಪ್ರಾಪ್ತೆಯ ವಿಡಿಯೋ ಮಾಡಿ ಬೆದರಿಸಿ  ನಿರಂತರ ಅತ್ಯಾಚಾರ; ಇಬ್ಬರ ಬಂಧನ

ಚಿಕ್ಕಮಗಳೂರು: ಬಾಲಕಿಯೊಬ್ಬಳು ಬಟ್ಟೆ ಬದಲಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಿ, ಆಕೆಯನ್ನು ಬೆದರಿಸಿ, ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ಬಾಲಕಿಗೆ ಕರೆದಾಗ ಬಾರದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿ, ಎರಡು ತಿಂಗಳಿಂದ ಅತ್ಯಾಚಾರ ನಡೆಸಿದ್ದು, ಮುಖ್ಯ ಆರೋಪಿ ಅನಿಲ್ ನಾಯ್ಕ್ ನ ಜತೆ ಗ್ರಾಮದ ಕಾರ್ತಿಕ್ ಎಂಬುವವನಿದ್ದ ಎನ್ನಲಾಗಿದೆ.

ಗಣಪತಿ ವಿಸರ್ಜನೆ ವೇಳೆ ವಿಡಿಯೋ ಬಗ್ಗೆ ಯುವಕರು ಮಾತಾಡಿಕೊಂಡಿದ್ದಾರೆ. ಬಳಿಕ ಅಪ್ರಾಪ್ತೆ ಸಖರಾಯಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ಅನಿಲ್ ನಾಯ್ಕ್ , ಬಾಲಾಜಿಯನ್ನು ಬಂಧಿಸಿದ್ದಾರೆ. ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು, ಕಾರ್ತಿಕ್, ಅಖಿಲೇಶ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


Spread the love