ಸಚಿವರ ಊರಲ್ಲಿ ಕಾನೂನಿಗೆ ಬೆಲೆ ಇಲ್ಲವೇ ? ಅಮೃತ್ ಶೆಣೈ ‌

Spread the love

ಸಚಿವರ ಊರಲ್ಲಿ ಕಾನೂನಿಗೆ ಬೆಲೆ ಇಲ್ಲವೇ ? ಅಮೃತ್ ಶೆಣೈ ‌

ಉಡುಪಿ: ಕಾರ್ಕಳದಲ್ಲಿ ಇತ್ತೀಚೆಗೆ ಪ್ರಾರ್ಥನಾ ಮಂದಿರದ ಮೇಲೆ ನಡೆದ ದಾಳಿ ಯನ್ನು” ಸಹಬಾಳ್ವೆ ಉಡುಪಿ ” ಇದರ ಅಧ್ಯಕ್ಷ ಅಮೃತ್ ಶೆಣೈ ಖಂಡಿಸಿದ್ದಾರೆ

ಯಾವುದೇ ಕಾನೂನು ಬಾಹಿರ ಚಟುವಟಿಕೆ ಎಲ್ಲೂ ಕಂಡು ಬಂದರೆ ಸಮೀಪದ ಪೋಲಿಸ್ ಠಾಣೆಗೆ ತಿಳಿಸುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ, ಅದನ್ನು‌ ಹೊರತು‌ ಪಡಿಸಿ ತಂಡೋಪತಂಡವಾಗಿ ಹೋಗಿ ದಾಳಿ ನಡೆಸಲು‌ ಹಿಂದೂ ಜಾಗರಣಾ ವೇದಿಕೆಯವರಿಗೆ ಅಧಿಕಾರ ನೀಡಿದವರಾರು ? ಬಿಜೆಪಿ ಸರಕಾರದ ಮೇಲೆ ಹಾಗೂ ಸಚಿವ ಸುನೀಲ್ ಮೇಲೆ ಇವರಿಗೆ ನಂಬಿಕೆ ಇಲ್ಲವೇ ಅಥವಾ ಸರಕಾರವೇ ತಮಗೆ ಕಾಪಾಡುತ್ತದೆ ಎಂಬ ಧೈರ್ಯದಲ್ಲಿ ಇವರು‌ ಕಾನೂನನ್ನು ಕೈಗೆತ್ತಿಕೊಂಡರಾ ? ಎಂದೂ ಅವರು ಪ್ರಶ್ನಿಸಿದ್ದಾರೆ ಉಡುಪಿ‌ ಜಿಲ್ಲೆಯಲ್ಲಿ ಶಾಂತಿಯುತ ಸಹಬಾಳ್ವೆ ಗೆ ಧಕ್ಕೆ ತರುವ ಯಾವುದೇ ಘಟನೆಗಳ ,ಶಕ್ತಿಗಳ‌ ಹಾಗೂ‌ ವ್ಯಕ್ತಿಗಳ ವಿರುದ್ಧ ಸಹಬಾಳ್ವೆ ತಂಡದ ಪದಾಧಿಕಾರಿಗಳು ಶಾಂತಿಯುತ ಹೋರಾಟ ನಡೆಸುತ್ತಾರೆ ಎಂದು ತಿಳಿಸಿದ ಅವರು ದಾಳಿ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ


Spread the love