ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆ ಬಿಜೆಪಿಗರ ಕ್ರೂರ ಮನಸ್ಥಿತಿ ಎತ್ತಿ ತೋರಿಸುತ್ತದೆ-ಗೀತಾ ವಾಗ್ಳೆ

Spread the love

ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆ ಬಿಜೆಪಿಗರ ಕ್ರೂರ ಮನಸ್ಥಿತಿ ಎತ್ತಿ ತೋರಿಸುತ್ತದೆ-ಗೀತಾ ವಾಗ್ಳೆ

ಉಡುಪಿ: ಹಿರಿಯ ರಾಜಕೀಯ ಮುತ್ಸದ್ದಿ, ಕಾಂಗ್ರೆಸ್ ನಾಯಕರೂ ಮಾಜಿ ಮುಖ್ಯಮಂತ್ರಿಗಳೂ ಆದ   ಸಿದ್ಧರಾಮಯ್ಯ ಅವರ ಬಗ್ಗೆ ಸಚಿವ ಶ್ರೀ ಅಶ್ವತ್ಥ್ ನಾರಾಯಣ ಅವರು ನೀಡಿರುವಂತಹ ಹೇಳಿಕೆ ಬಿಜೆಪಿಗರ ಮನಸ್ಸುಗಳಲ್ಲಿ ಎಷ್ಟೊಂದು ಕ್ರೂರತೆ ತುಂಬಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಅವರ ಹೇಳಿಕೆಯಲ್ಲಿ ದ್ವಂದ್ವ ರೀತಿಯ ಕ್ರೂರತೆ ಎದ್ದು ಕಾಣುತ್ತದೆ.ಮೊದಲನೆಯದಾಗಿ ಟಿಪ್ಪು ಒಬ್ಬ ಮುಸ್ಲಿಂ ವ್ಯಕ್ತಿ ಯಾಗಿದ್ದ ಎನ್ನುವ ಕಾರಣಕ್ಕೆ ಆತನು ಸತ್ತ ರೀತಿಯ ಬಗ್ಗೆ ಸಂತಸ ,ಇನ್ನೊಂದೆಡೆ ಅಂತಹ ರೀತಿಯಲ್ಲೇ ಸಿದ್ಧರಾಮಯ್ಯ ಅವರು ಸಾಯಬೇಕು ಎನ್ನುವ ವಿಕೃತ ಮನಸ್ಸನ್ನು ನಾವು ಅರ್ಥೈಸಿಕೊಳ್ಳಬಹುದಾಗಿದೆ. ರಾಜಕೀಯದಲ್ಲಿ ಹೇಳಿಕೆ, ಪ್ರತಿಹೇಳಿಕೆಗಳು ಸರ್ವೇ ಸಾಮಾನ್ಯ. ಒಬ್ಬರನ್ನೊಬ್ಬರು ಕಾಲೆಳೆಯುವುದೂ ಇದ್ದದ್ದೇ. ಆದರೆ ಇಂತಹ ಭಯಾನಕ ಹೇಳಿಕೆಗಳನ್ನು ಕೊಡುವುದು ಬಿಜೆಪಿಗರಿಗೆ ಮಾತ್ರ ಸಾಧ್ಯ.ಎಂದವರು ಹೇಳಿದ್ದಾರೆ.

ಅಶ್ವತ್ಥನಾರಾಯಣ ಅವರು ಈ ಹೇಳಿಕೆ ಕೊಡುವ ಮೊದಲು ಸಿದ್ಧರಾಮಯ್ಯ ಅವರ ವಯಸ್ಸನ್ನಾದರೂ ಗಮನಿಸಬೇಕಿತ್ತು.ರಾಜ್ಯವನ್ನಾಳುವವರ ಬಾಯಿಯಿಂದ ಇಂತಹ ಮಾತುಗಳು ಶೋಭೆಯನ್ನು ತರುವುದಿಲ್ಲ. ಸರ್ಕಾರವನ್ನು ನಡೆಸುವವರು ನಾಲಿಗೆಯನ್ನು ಸ್ವಲ್ಪ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದನ್ನು ಕಲಿಯಬೇಕು.ತಮ್ಮ ಅರ್ಥವಿಲ್ಲದ, ಅಸಂಬದ್ಧ ಹೇಳಿಕೆಗಾಗಿ ಸಚಿವ ಅಶ್ವತ್ಥ ನಾರಾಯಣ ಅವರು ಕೂಡಲೇ ಕ್ಷಮೆಯಾಚಿಸಬೇಕು. ಐದು ವರ್ಷ ಯಾವುದೇ ಹಗರಣಗಳಿಲ್ಲದೇ ರಾಜ್ಯದ ಜನತೆಗೆ ಸ್ವಚ್ಛ ಹಾಗೂ ಸಮೃದ್ಧ ಆಡಳಿತವನ್ನು ನೀಡಿರುವ ಬಡಜನರ ಕಣ್ಮಣಿ ಸಿದ್ಧರಾಮಯ್ಯ ಅವರ ಹೆಸರನ್ನೂ ಹೇಳುವಂತಹ ಯೋಗ್ಯತೆ ಇಂತಹ ಹೊಲಸು ನಾಲಿಗೆಯ ಶಾಸಕರಿಗಿಲ್ಲ ಎಂದು ಗೀತಾ ವಾಗ್ಳೆ ಅವರು ಹೇಳಿದ್ದಾರೆ.


Spread the love