ಸಚಿವ ಈಶ್ವರಪ್ಪ ಮೆದುಳಿನ ಸಮತೋಲನ ತಪ್ಪಿದೆ, ಕೂಡಲೇ ಚಿಕಿತ್ಸೆ ಕೊಡಿಸಿ – ವಿನಯ್‌ ಕುಮಾರ್‌ ಸೊರಕೆ

Spread the love

ಸಚಿವ ಈಶ್ವರಪ್ಪ ಮೆದುಳಿನ ಸಮತೋಲನ ತಪ್ಪಿದೆ, ಕೂಡಲೇ ಚಿಕಿತ್ಸೆ ಕೊಡಿಸಿ – ವಿನಯ್‌ ಕುಮಾರ್‌ ಸೊರಕೆ

ಉಡುಪಿ: ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಕಾಂಗ್ರೆಸ್ನವರು ಕುಡುಕ  ಸು ಮಕ್ಕಳು.. ಎಂದು ಬೆಂಗಳೂರಿನ ವಿಧಾನಸೌಧ ಬಳಿ ಅವಾಚ್ಯವಾಗಿ ಹೇಳಿಕೆ ನೀಡಿರುವುದರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಕಿಡಿಕಾರಿದ್ದಾರೆ.

 ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮದೊಂದಿಗೆ  ಮಾತನಾಡಿದ ಅವರು ಇದು ಅವಾಚ್ಯ ಮತ್ತು ಅವಹೇಳನಕಾರಿ. ವಿಧಾನಸೌಧಕ್ಕೆ ಬಹಳ ಪಾವಿತ್ರ್ಯತೆ ಇದೆ. ಈಶ್ವರಪ್ಪ ಒಬ್ಬ ಅನಾಗರೀಕ ವ್ಯಕ್ತಿ ಎಂದರು.

ಸಚಿವ ಈಶ್ವರಪ್ಪ ಮೆದುಳಿನ ಸಮತೋಲನ ತಪ್ಪಿದೆ. ಬಿಜೆಪಿ ಅವರ ಮೆದುಳಿನ ಪರೀಕ್ಷೆ ಮಾಡಿಸಬೇಕು. ತಲೆಯ ಪರೀಕ್ಷೆ ನಡೆಸದಿದ್ದರೆ ಮುಂದೆ ರಾಜ್ಯಕ್ಕೆ ಆಗಬಹುದಾದ ಅನಾಹುತ ಎದುರಿಸಬೇಕಾದೀತು ಎಂದರು.

ಕೂಡಲೇ ಈಶ್ವರಪ್ಪ ಅವರನ್ನು ಚಿಕಿತ್ಸೆಗೆ ಒಳಪಡಿಸಬೇಕು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರು ಈಶ್ವರಪ್ಪನವರ ಮೆದುಳಿಗೂ ನಾಲಿಗೆಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆಗಾಗ ಇದು ಸಾಬೀತಾಗುತ್ತಿದೆ. ಶೀಘ್ರ ಈಶ್ವರಪ್ಪರಿಗೆ ಚಿಕಿತ್ಸೆ ಕೊಡಿಸಿ ಎಂದು  ಬಿಜೆಪಿ ನಾಯಕರಿಗೆ ಮಾಜಿ ಸಚಿವ ವಿನಯ್ ಕುಮಾರ ಸೊರಕೆ ಸಲಹೆ ನೀಡಿದರು.


Spread the love