ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಅಮಿತ್ ಷಾ ಸಿಡಿಮಿಡಿ!

Spread the love

ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಅಮಿತ್ ಷಾ ಸಿಡಿಮಿಡಿ!

ಕುಂದಾಪುರ: ಬೈಂದೂರು ವ್ಯಾಪ್ತಿಯ ಸಿದ್ದಾಪುರದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ರೋಡ್ ಶೋ ವೇಳೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಸಿಡಿಮಿಡಿಗೊಂಡ ಘಟನೆ ನಡೆಯಿತು.

ಕೇಂದ್ರ ಗೃಹ ಸಚಿವ ಅಮಿತ್‌ ಷಾ ಭಾಷಣ ಆರಂಭಿಸಿದ ವೇಳೆ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಕನ್ನಡಕ್ಕೆ ಅನುವಾದ ಮಾಡಲು ಮುಂದಾದ ವೇಳೆ ನೆರೆದ ಜನಸ್ತೋಮ ಅನುವಾದ ಬೇಡ ಎಂದು ಬೊಬ್ಬಿರಿದರು.

ಈ ಮಧ್ಯೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕರ್ತರ ಅಭಿಪ್ರಾಯವನ್ನು ಅಮಿತ್‌ ಷಾ ಅವರ ಗಮನಕ್ಕೆ ತರಲು ಪ್ರಯತ್ನಿಸುತ್ತಿರುವಾಗ ಅಮಿತ್‌ ಷಾ ಕೋಟ ವಿರುದ್ದ ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು. ಬಳಿಕ ಕೋಟ ಶ್ರೀನಿವಾಸ ಪೂಜಾರಿ ಮುಗುಳ್ನಕ್ಕು ಕಾರ್ಯಕರ್ತರತ್ತ ಕಣ್ಣಾಯಿಸಿದರು.


Spread the love